ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಾಲಕಿ ಗರ್ಭಿಣಿ: ಮುಖ್ಯ ಶಿಕ್ಷಕ ಬಂಧನ.!

08:30 AM May 29, 2024 IST | Bcsuddi
Advertisement

 

Advertisement

ಚಿಕ್ಕಬಳ್ಳಾಪುರ:  ಸರ್ಕಾರಿ ಶಾಲೆಯೊಂದರ ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿದ್ದು ಇದಕ್ಕೆ ಕಾರಣನಾದ ಶಾಲೆಯ ಮುಖ್ಯ ಶಿಕ್ಷಕನನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

13 ವರ್ಷದ ಬಾಲಕಿಯ ಆರೋಗ್ಯ. ದಲ್ಲಿ ಇತ್ತೀಚೆಗೆ ಏರುಪೇರಾಗಿತ್ತು. ಚಿಕಿತ್ಸೆಗಾಗಿ ಪೋಷಕರು ಆಸ್ಪತ್ರೆಗೆ ಕರೆದೊಯ್ದ ವೇಳೆ ಆಕೆ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ.

ಬಾಲಕಿಯನ್ನು. ವಿಚಾರಿಸಿದಾಗ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಾಲಕಿಯ ದೂರು ಆಧರಿಸಿ ಮುಖ್ಯ ಶಿಕ್ಷಕನನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಪೋಕ್ರೋ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಎದುರು ಶಿಕ್ಷಕನನ್ನು ಹಾಜರು ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Tags :
ಬಾಲಕಿ ಗರ್ಭಿಣಿ: ಮುಖ್ಯ ಶಿಕ್ಷಕ ಬಂಧನ.!
Advertisement
Next Article