ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಾಬರಿ ಮಸೀದಿಗೆ ನೀಡಿದ ಸ್ಥಳದಲ್ಲಿ ಹೊಸ ಮಸೀದಿ ನಿರ್ಮಾಣ- ಜವಾಬ್ದಾರಿ ಹೊತ್ತ ಬಿಜೆಪಿ ನಾಯಕ

12:29 PM Dec 19, 2023 IST | Bcsuddi
Advertisement

ದೆಹಲಿ: ಅಯೋಧ್ಯಾ ರಾಮ ಜನ್ಮ ಭೂಮಿ ಪ್ರಕರಣದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿತ್ತು.

Advertisement

ಇದೀಗಾ ರಾಮಮಂದಿರದ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇತ್ತ ವಿವಾದಿತ ಬಾಬರಿ ಮಸೀದಿಗೆ ನೀಡಿದ ಸ್ಥಳದಲ್ಲಿ ಹೊಸದಾಗಿ ಮಸೀದಿ ನಿರ್ಮಾಣ ಮಾಡಲು ಮುಂದಾಗಿದೆ. ಈ ಜವಾಬ್ದಾರಿ ಹೊಣೆಯನ್ನು ಬಿಜೆಪಿ ನಾಯಕ ಮುಂಬೈನ ಹಾಜಿ ಅರಾಫತ್ ಶೇಖ್ ಅವರಿಗೆ ನೀಡಲಾಗಿದೆ.

2019ರಲ್ಲಿ ನ್ಯಾಯಾಲಯದ ಆದೇಶದ ಅನ್ವಯ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ. ನಂತರ ಮಸೀದಿ ನಿರ್ಮಾಣಕ್ಕೆ ಉತ್ತರ ಪ್ರದೇಶ ಸರ್ಕಾರ ಧನ್ನಿಪುರದಲ್ಲಿ ಹೊಸ ಮಸೀದಿ ನಿರ್ಮಾಣ ಮಾಡಲು ಅವಕಾಶವನ್ನು ನೀಡಿತ್ತು.

ಇದೀಗ ಹೊಸ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರ ಯೋಜನೆ ರೂಪಿಸಿದ್ದು, ಉತ್ತರ ಪ್ರದೇಶ ಸುನ್ನಿ ಮಂಡಳಿಯ ಅಧ್ಯಕ್ಷ ಜಾಫರ್ ಫಾರೂಕಿ ಅವರು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಹಾಜಿ ಅರಾಫತ್ ಅವರನ್ನು ಮಸೀದಿ ನಿರ್ಮಾಣದ ಮೇಲ್ವಿಚಾರಣೆಯ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲು ನಿರ್ಧರಿಸಿದ್ದಾರೆ.

Advertisement
Next Article