For the best experience, open
https://m.bcsuddi.com
on your mobile browser.
Advertisement

ಬಾಂಬ್ ಬ್ಲಾಸ್ಟ್ – ಇಬ್ಬರು ಅರೆಸೇನಾಪಡೆ ಯೋಧರು, ಓರ್ವ ಪತ್ರಕರ್ತನಿಗೆ ಗಾಯ

05:45 PM Dec 02, 2023 IST | Bcsuddi
ಬಾಂಬ್ ಬ್ಲಾಸ್ಟ್ – ಇಬ್ಬರು ಅರೆಸೇನಾಪಡೆ ಯೋಧರು  ಓರ್ವ ಪತ್ರಕರ್ತನಿಗೆ ಗಾಯ
Advertisement

ರಾಯ್ಪುರ: ನಕ್ಸಲರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಮತ್ತು ಒಬ್ಬ ಪತ್ರಕರ್ತ ಗಾಯಗೊಂಡ ಘಟನೆ ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಸಪ್ತಾಹದ ನಡುವೆ ಜಿಲ್ಲೆಯ ಬಲಸೂರ್ ಪಲ್ಲಿ ಮಾರ್ಗ್ ಪ್ರದೇಶದಲ್ಲಿ ನಕ್ಸಲರು ಹಾಕಿದ್ದ ಪೋಸ್ಟರ್‌ಗಳನ್ನು ಭದ್ರತಾ ಸಿಬ್ಬಂದಿ ತೆಗೆದುಹಾಕುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಹಲವಾರು ಕಾರಣಗಳಿಂದ ಪ್ರಾಣ ಕಳೆದುಕೊಂಡ 54 ನಕ್ಸಲರ ಸ್ಮರಣಾರ್ಥ ಪಿಎಲ್‌ಜಿಎ ಸಪ್ತಾಹವನ್ನು ಭಯೋತ್ಪಾದಕರು ಆಚರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಈ ಘಟನೆಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.

Advertisement

ಛತ್ತೀಸ್‌ಗಢದ ಧಮ್ತಾರಿ ಪ್ರದೇಶದಲ್ಲಿ ಮತದಾನಕ್ಕೆ ಒಂದು ದಿನ ಮೊದಲು ಎರಡು ಕಡಿಮೆ ತೀವ್ರತೆಯ ಐಇಡಿ ಸ್ಫೋಟಕಗಳನ್ನು ಭಯೋತ್ಪಾದಕರು ಸ್ಫೋಟಿಸಿದ್ದರು. ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಅಧಿಕಾರಿಗಳು ಘಟನಾ ಪ್ರದೇಶದಿಂದ 5 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು ವಶಪಡಿಸಿಕೊಂಡಿದ್ದರು.

ಇನ್ನೂ ಇದಕ್ಕೂ ಮುನ್ನ, ಛತ್ತೀಸ್‌ಗಢದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ರಾಜ್ಯದ ಬಿಂದ್ರನವಗಢ ಪ್ರದೇಶದಲ್ಲಿ ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ನಕ್ಸಲರು ಸುಧಾರಿತ ಸ್ಫೋಟಕ ಸಾಧನವನ್ನು ಸ್ಫೋಟಿಸಿದ್ದು  ಇದರಲ್ಲಿ  ಒಬ್ಬ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್  ಯೋಧ ಸಾವನ್ನಪ್ಪಿದ್ದರು.

Author Image

Advertisement