ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಲಿಷ್ಠ ರಾಷ್ಟ್ರವೊಂದರ ಸೇನೆಗೆ ಭಾರತದ ಶೂ - 100 ಕೋಟಿ ಮೌಲ್ಯದ ಶೂಗಳು ರಷ್ಯಾಗೆ ರಫ್ತು

04:05 PM Jul 11, 2024 IST | Bcsuddi
Advertisement

ಭಾರತದಲ್ಲಿ ತಯಾರಾಗುವ ಶೂಗಳಿಗೆ ವಿದೇಶದಲ್ಲಿ ಡಿಮ್ಯಾಂಡ್​ ಹೆಚ್ಚಾಗಿದ್ದು, ರಷ್ಯಾ ದೇಶವು ತನ್ನ ಸೈನಿಕರಿಗಾಗಿ ಭಾರತದಿಂದ ಶೂಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಹೌದು, ಬಿಹಾರದ ಹಾಜಿಪುರದ ಕೈಗಾರಿಕಾ ಘಟಕದಲ್ಲಿ ತಯಾರಾಗುವ ಶೂಗಳ ಹೆಜ್ಜೆ ಸಪ್ಪಳ ರಷ್ಯಾದಲ್ಲಿ ಕೇಳಿಬರುತ್ತಿದೆ. ರಷ್ಯಾ ಸೈನಿಕರು ಆರಾಮ ಮತ್ತು ಕರ್ತವ್ಯಕ್ಕೆ ಈ ಶೂಗಳನ್ನೇ ಬಯಸುತ್ತಿದ್ದಾರೆ. ಯುದ್ಧಭೂಮಿಯಲ್ಲಿ, ಹಿಮದ ನೆಲದಲ್ಲಿ ಹೆಜ್ಜೆ ಹಾಕಲು ಹಾಜಿಪುರದಿಂದ ವಿಶೇಷವಾಗಿ ತಯಾರಿಸಿದ ಶೂಗಳು ರಷ್ಯಾ ದೇಶಕ್ಕೆ ರಫ್ತು ಆಗುತ್ತಿದೆ. ಇದು ಕೊರೆಯುವ ಚಳಿಯಲ್ಲೂ ಸೈನಿಕರನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಶಿವ ಕುಮಾರ್​ ರಾಯ್​ ಎಂಬವರು ಕಾಂಪಿಟನ್ಸ್​​ ಎಕ್ಸ್​ಪೋರ್ಟ್ಸ್​​ ಪ್ರೈವೇಟ್​​ ಲಿಮಿಟೆಡ್​ ಎಂಬ ಕಂಪನಿ ಹುಟ್ಟುಹಾಕಿ ಅದರ ಮೂಲಕ ಹಾಜಿಪುರದಲ್ಲಿ ಸ್ಥಳೀಯ ಉದ್ಯೋಗವನ್ನು ಸೃಷ್ಟಿಸಲು ಮುಂದಾದರು. ಸುರಕ್ಷತಾ ಶೂಗಳನ್ನು ತಯಾರಿಸಿದರು. ಬಳಿಕ ಅವುಗಳನ್ನು ರಷ್ಯಾಗೆ ರಫ್ತು ಮಾಡಿದರು. ಸದ್ಯ ರಷ್ಯಾದ ಜೊತೆಗೆ ಯುರೋಪಿಯನ್​​ ಮಾರುಕಟ್ಟೆಗೆ ಈ ಶೂಗಳು ತಲುಪುತ್ತಿವೆ. ದೇಶಿಯ ಮಾರುಕಟ್ಟೆಗೂ ಸದ್ಯದಲ್ಲೇ ಬಿಡುಗಡೆ ಮಾಡಲು ಶಿವ ಕುಮಾರ್​ ರಾಯ್​ ಮುಂದಾಗಿದ್ದಾರೆ.

Advertisement

Advertisement
Next Article