ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಜೆಟ್ 2024: ಹೊಸ ಆದಾಯ ತೆರಿಗೆ ಸ್ಲ್ಯಾಬ್ ಘೋಷಣೆ - ಇಲ್ಲಿದೆ ಡಿಟೇಲ್ಸ್

02:05 PM Jul 23, 2024 IST | Bcsuddi
Advertisement

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು ಈ ಬಾರಿ ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಮಾಣಿತ ಕಡಿತ ಹೆಚ್ಚಿಸಲಾಗಿದ್ದು 3ರಿಂದ 7 ಲಕ್ಷ ರೂ.ಗೆ ಶೇ.5ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. 3 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆದಾರರು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

Advertisement

7ರಿಂದ 10 ಲಕ್ಷ ಆದಾಯ ಹೊಂದಿರುವವರಿಗೆ ಶೇ.10ರಷ್ಟು ತೆರಿಗೆ ವಿಧಿಸಲಾಗಿದೆ. ಹಣಕಾಸು ಸಚಿವರ ಪ್ರಕಾರ, ಹೊಸ ಘೋಷಣೆಗಳಿಂದ ನಾಲ್ಕು ಕೋಟಿ ಜನರು ಹೊಸ ತೆರಿಗೆ ವ್ಯವಸ್ಥೆಯಲ್ಲಿ 17,500 ರೂ.ವರೆಗೆ ಪ್ರಯೋಜನ ಪಡೆಯುತ್ತಾರೆ.

ಎಷ್ಟು ಆದಾಯದೊಂದಿಗೆ ಜನರು ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ?
ರೂ 3,00,000 ವರೆಗೆ: ಇಲ್ಲ
3,00,001 ರಿಂದ 7,00,000: 5%
7,00,001 ರಿಂದ 10,00,000: 10%
10,00,001 ರಿಂದ 12,00,000: 15%
12,00,001 ರಿಂದ 15,00,000: 20%
ರೂ 15,00,000 ಕ್ಕಿಂತ ಹೆಚ್ಚು: 30%

 

Advertisement
Next Article