ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಫೇಸ್ ಬುಕ್ ಪ್ರೇಮಿಯನ್ನು ಮದುವೆಯಾಗಲು ಪಾಕ್ ಗೆ ಹೊರಟ್ಟಿದ್ದ ಅಂಜು ಭಾರತಕ್ಕೆ ವಾಪಸ್

10:15 AM Nov 30, 2023 IST | Bcsuddi
Advertisement

ಹೊಸದಿಲ್ಲಿ:ಪ್ರಿಯಕರನನ್ನು ಮದುವೆಯಾಗಲು ಭಾರತ ತೊರೆದು ಪಾಕಿಸ್ಥಾನಕ್ಕೆ ತೆರಳಿದ್ದ ಅಂಜು ಅಲಿಯಾಸ್ ಫಾತಿಮಾ ತನ್ನ ಮಕ್ಕಳನ್ನು ನೋಡಲು ಭಾರತಕ್ಕೆ ಹಿಂತಿರುಗಿದ್ದಾಳೆ.ಅಂಜುಗೆ ಫೇಸ್ ಬುಕ್ ನಲ್ಲಿ ಪಾಕ್ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು.ಆ ಪರಿಚಯ ಪ್ರೀತಿಗೆ ತಿರುಗಿ ಬಳಿಕ ಆಕೆ ಆತನನ್ನು ಮದುವೆಯಾಗುವ ಉದ್ದೇಶದಿಂದ ಭಾರತ ತೊರೆದು ಪಾಕಿಸ್ಥಾನಕ್ಕೆ ತೆರಳಿದ್ದಳು.

Advertisement

ಇದೀಗ ಆಕೆಗೆ ತನ್ನ ಮಕ್ಕಳನ್ನು ನೋಡುವ ಆಸೆಯಾಗಿದ್ದು ಬುಧವಾರ ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಬಂದಿದ್ದು ಅಮೃತಸರಕ್ಕೆ ತೆರಳಿ, ಅಲ್ಲಿಂದ ದಿಲ್ಲಿಗೆ ಪ್ರಯಾಣಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಉತ್ತರಪ್ರದೇಶದ ಮೂಲದವರಾದ ಅಂಜು ರಾಜಸ್ಥಾನದ ಆಳ್ವಾರ್ ನಿವಾಸಿಯಾಗಿದ್ದು ಜುಲೈನಲ್ಲಿ ತಮ್ಮ ಎರಡು ಮಕ್ಕಳನ್ನೂ ತೊರೆದು ಪಾಕಿಸ್ಥಾನದ ಖೈಬರ್ ಪಖ್ತುಂಖ್ವಾಗೆ ಪ್ರಿಯಕರನನ್ನು ಮದುವೆಯಾಗುವ ಸಲುವಾಗಿ ತೆರಳಿದ್ದರು.

Advertisement
Next Article