For the best experience, open
https://m.bcsuddi.com
on your mobile browser.
Advertisement

ಪ್ರೀತಿ ಮಾಡೋರೇ ಹುಷಾರ್‌, ನಿಮ್ಮನ್ನು ಕಾಡಬಹುದು ಲವ್‌ ಬ್ರೈನ್‌ ಸಮಸ್ಯೆ!

11:43 AM Apr 25, 2024 IST | Bcsuddi
ಪ್ರೀತಿ ಮಾಡೋರೇ ಹುಷಾರ್‌  ನಿಮ್ಮನ್ನು ಕಾಡಬಹುದು ಲವ್‌ ಬ್ರೈನ್‌ ಸಮಸ್ಯೆ
Advertisement

ಪ್ರೀತಿಯಲ್ಲಿ ಬಿದ್ದವರಿಗೆ ಪ್ರಪಂಚದ ಅರಿವೇ ಇರುವುದಿಲ್ಲ ಎಂದು ಹೇಳುತ್ತಾರೆ. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಪರಿಜ್ಞಾನ ಇರುವುದಿಲ್ಲ. ಈ ಪ್ರೀತಿ-ಪ್ರೇಮದ ಹುಚ್ಚು ಅತಿಯಾದ್ರೆ ಮನುಷ್ಯ ಏನೂ ಬೇಕಾದ್ರೂ ಆಗಬಹುದು, ಈಗ ಪ್ರೀತಿಗೆ ಸಂಬಂಧಿಸಿದ ಮಾನಸಿಕ ಸಮಸ್ಯೆಯೊಂದು ಚೀನಾದಲ್ಲಿ ಪತ್ತೆಯಾಗಿದೆ. ಅದಕ್ಕೆ ʼಲವ್‌ ಬ್ರೈನ್ʼ ಎಂದು ಹೆಸರಿಸಲಾಗಿದೆ. ಹೀಗೆ ಇಲ್ಲೊಬ್ಬ ಹುಡುಗಿ ತನ್ನ ದಿನಕ್ಕೆ 100 ತನ್ನ ಬಾಯ್​ಫ್ರೆಂಡ್ ಜೊತೆ ಮಾತಾಡಿ ಆಸ್ಪತ್ರೆ ಸೇರಿರೋ ಘಟನೆ ಚೀನಾದಲ್ಲಿ ನಡೆದಿದೆ.ಕ್ಸಿಯಾಯು ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ನಿವಾಸಿ. ಈಕೆಯು ತನ್ನ ಗೆಳೆಯನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಬಳಿಕ  ಆತನ ನಂಬಿಕೊಂಡಿದ್ದಳು. ಆಕೆಗೆ ತನಗೆ ತಾನೇ ಯಾವಾಗಲೂ ಬಾಯ್‌ಫ್ರೆಂಡ್‌ ನನ್ನ ಜೊತೆಯೇ ಇರಬೇಕು ಅಂತಾ ಅಂದುಕೊಂಡಿದ್ದಳು. ಎಷ್ಟರ ಮಟ್ಟಿಗೆ ಅಂದ್ರೆ ಆತ ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ ಅನ್ನೋದನ್ನು ತನಗೆ ತಿಳಿಸಬೇಕು ಎಂದು ಆಕೆ ತಿಳಿದುಕೊಳ್ಳಲು ಪ್ರಾರಂಭಿಸಿದ್ದಳು. ಹಗಲು, ರಾತ್ರಿ ಎನ್ನದೇ ಪ್ರತಿ ಕ್ಷಣ ಆಕೆ ಮೆಸೇಜ್‌ ಕಳುಹಿಸಿದ್ದರೆ ಕೂಡಲೇ ಬಾಯ್‌ಫ್ರೆಂಡ್‌ ರಿಪ್ಲೈ ನೀಡಲೇಬೇಕಿತ್ತು. ಹೀಗಾಗಿ ಯುವತಿಯ ವರ್ತನೆಯಿಂದ ಬಾಯ್‌ಫ್ರೆಂಡ್‌ಗೆ ನೆಮ್ಮದಿಯೇ ನೆಮ್ಮದಿ ಇಲ್ಲದಂತೆ ಆಗುತ್ತಿತ್ತಂತೆ. ದಿನಕ್ಕೆ 100ಕ್ಕೂ ಹೆಚ್ಚು ಬಾರಿ ಫೋನ್​ನಲ್ಲಿ ಮಾತಾಡುವಂತೆ ಒತ್ತಾಯಿಸುತ್ತಿದ್ದಳಂತೆ, ಜೊತೆಗೆ ವಿಡಿಯೋ ಕಾಲ್​ ಮಾಡುವಂತೆ ಹಿಂಸೆ ನೀಡುತ್ತಿದ್ದಳಂತೆ. ಹೀಗಾಗಿ ಇದಕ್ಕೆ ಬೇಸತ್ತ ಬಾಯ್‌ಫ್ರೆಂಡ್‌ ಆಕೆಯ ಮೆಸೇಜ್‌ ಅನ್ನು ಅವೈಡ್ ಮಾಡಲು ಶುರು ಮಾಡಿದನಂತೆ.ಇದರಿಂದ ಮನನೊಂದ ಯುವತಿ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕುತ್ತಿದ್ದಳಂತೆ. ಬಳಿಕ  ಇದನ್ನು ನೋಡಲಾರದೇ ಬಾಯ್‌ಫ್ರೆಂಡ್‌ ಪೊಲೀಸರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದಾದ ಬಳಿಕ ಈಕೆ ಲವ್‌ ಬ್ರೇನ್‌ ಕಾಯಿಲೆಗೆ ತುತ್ತಾಗಿದ್ದಾಳೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಈ ಲವ್‌ ಬ್ರೇನ್‌ ಒಂದು ರೀತಿಯ ಮಾನಸಿಕ ಕಾಯಿಲೆಯಾಗಿದ್ದು, ಲವ್​​ ಬ್ರೇನ್​ಗೆ ತುತ್ತಾದವರು ಸುಖಾ ಸುಮ್ಮನೆ ಆತಂಕ ಪಡುತ್ತಿರುತ್ತಾರೆ. ಇಲ್ಲವಾದರೇ ಖಿನ್ನತೆಗೆ ಒಳಗಾಗುತ್ತಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿದಿದ್ದಾರೆ.

Author Image

Advertisement