For the best experience, open
https://m.bcsuddi.com
on your mobile browser.
Advertisement

ಪ್ರಧಾನಿ ಮೋದಿ ಹ್ಯಾಟ್ರಿಕ್ ಬಾರಿಸಲಿದ್ದಾರೆ - ಎನ್‌ಡಿಎಗೆ ಹೆಚ್ಚು ಸ್ಥಾನ ಎಬಿಪಿ ನ್ಯೂಸ್- ಸಿ ವೋಟರ್ ಸಮೀಕ್ಷೆ

10:23 AM Dec 26, 2023 IST | Bcsuddi
ಪ್ರಧಾನಿ ಮೋದಿ ಹ್ಯಾಟ್ರಿಕ್ ಬಾರಿಸಲಿದ್ದಾರೆ   ಎನ್‌ಡಿಎಗೆ ಹೆಚ್ಚು ಸ್ಥಾನ ಎಬಿಪಿ ನ್ಯೂಸ್  ಸಿ ವೋಟರ್ ಸಮೀಕ್ಷೆ
Advertisement

ನವದೆಹಲಿ : ಪ್ರಧಾನಿ ಮೋದಿ ಹ್ಯಾಟ್ರಿಕ್ ಬಾರಿಸಲಿದ್ದಾರೆ ಎಂದು ಎಬಿಪಿ ನ್ಯೂಸ್- ಸಿ ವೋಟರ್ ಸಮೀಕ್ಷೆ ಹೇಳಿದೆ. ಈಗ ಲೋಕಸಭೆ ಚುನಾವಣೆ ನಡೆದರೂ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯಿಂದ ಮಾಹಿತಿ ಹೊರಬಿದ್ದಿದೆ. ಎನ್‌ಡಿಎ ಶೇ. 42 ರಷ್ಟು ಮತ ಮತ ಪಡೆದು 295 – 335 ಸ್ಥಾನ ಗಳಿಸುವ ಸಾಧ್ಯತೆ ಇದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 353 ಸ್ಥಾನ ಪಡೆದುಕೊಂಡಿತ್ತು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಶೇಕಡಾ 38 ರಷ್ಟು ಮತ ಗಳಿಸಿ 165 -205 ಸ್ಥಾನ ಪಡೆಯಬಹುದು. ಇತರರು ಶೇಕಡಾ 20ರಷ್ಟು ಮತಗಳೊಂದಿಗೆ 35 – 65 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿ ಬಿಜೆಪಿ 73 ರಿಂದ 75 ಸ್ಥಾನ ಗಳಿಸುವ ಸಾಧ್ಯತೆ ಇದೆ. ದೇಶದ ಮುಂದಿನ ಪ್ರಧಾನಿಯಾರಾಗಬೇಕು ಎನ್ನುವ ಪ್ರಶ್ನೆಗೆ ಶೇಕಡಾ 58.6 ರಷ್ಟು ಮಂದಿ ಪ್ರಧಾನಿ ಮೋದಿಯವರ ಹೆಸರನ್ನು ಹೇಳಿದ್ದಾರೆ. ಶೇಕಡ 32ರಷ್ಟು ಮಂದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement
Author Image

Advertisement