For the best experience, open
https://m.bcsuddi.com
on your mobile browser.
Advertisement

ಪ್ರಧಾನಿ ಮೋದಿ ವಿರುದ್ಧ ಲೇವಡಿ, ಮಾಲ್ಡೀವ್ಸ್​ಗೆ ವಿಮಾನ ಬುಕಿಂಗ್ಸ್​ ರದ್ದುಗೊಳಿಸಿದ 'ಈಸ್​ ಮೈ ಟ್ರಿಪ್'

09:39 AM Jan 08, 2024 IST | Bcsuddi
ಪ್ರಧಾನಿ ಮೋದಿ ವಿರುದ್ಧ ಲೇವಡಿ  ಮಾಲ್ಡೀವ್ಸ್​ಗೆ ವಿಮಾನ ಬುಕಿಂಗ್ಸ್​ ರದ್ದುಗೊಳಿಸಿದ  ಈಸ್​ ಮೈ ಟ್ರಿಪ್
Advertisement

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಲೇವಡಿಯಿಂದ, ಪ್ರವಾಸೋದ್ಯಮವನ್ನೇ ನಂಬಿರುವ ಮಾಲ್ಡೀವ್ಸ್​ಗೆ ಭಾರೀ ಹೊಡೆತ ಬಿದ್ದಿದೆ.ಈಗಾಗಲೇ ಹಲವು ಮಂದಿ ಮಾಲ್ಡೀವ್ಸ್​ಗೆ ಪ್ರವಾಸಕ್ಕೆಂದು ವಿಮಾನ, ಹೋಟೆಲ್​ಗಳನ್ನು ಬುಕ್​ ಮಾಡಿದವರು ರದ್ದುಗೊಳಿಸಿದ್ದಾರೆ, ಇದರೊಂದಿಗೆ ಈ ವಿವಾದಗಳ ಬೆನ್ನಲ್ಲೇ ಹೆಸರಾಂತ ಟ್ರಾವೆಲ್ ಏಜೆನ್ಸಿ ‘ಈಸ್​ ಮೈ ಟ್ರಿಪ್’​ ಮಾಲ್ಡೀವ್ಸ್‌ನತ್ತ ಸಾಗಬೇಕಿದ್ದ ತನ್ನೆಲ್ಲಾ ವಿಮಾನದ ಬುಕಿಂಗ್ಸ್​ಗಳನ್ನು ಸ್ಥಗಿತಗೊಳಿಸಿದೆ.

ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್​ ಸಚಿವರು ನೀಡಿರುವ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ #BoycottMaldives ಎಂಬುದು ಹೆಚ್ಚು ಟ್ರೆಂಡ್​ ಆಗಿತ್ತು.

ಕಳೆದ 48 ಗಂಟೆಗಳಲ್ಲಿ ಅನೇಕ ಭಾರತೀಯರು ಮಾಲ್ಡೀವ್ಸ್​ಗೆ ತೆರಳಲು ಮಾಡಿದ್ದ ಬುಕಿಂಗ್ ಅನ್ನು ರದ್ದುಗೊಳಿಸಿದ್ದು, ನಮ್ಮ ದೇಶವನ್ನು ದ್ವೇಷಿಸುವ ದೇಶಕ್ಕೆ ಹೋಗಲು ಭಾರೀ ಹಣವನ್ನು ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಎಕ್ಸ್​ನಲ್ಲಿಪೋಸ್ಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

Advertisement

ಇದೀಗ ಈಸಿಮೈಟ್ರಿಪ್(EaseMyTrip) ಸಹ ಸಂಸ್ಥಾಪಕ ನಿಶಾಂತ್ ಪಿಟ್ಟಿ ಅವರು ಮಾಲ್ಡೀವ್ಸ್​ಗೆ ತೆರಳಬೇಕಿದ್ದ ಎಲ್ಲಾ ವಿಮಾನಗಳ ಬುಕಿಂಗ್​ಗಳನ್ನು ದಿಢೀರ್​ ಸ್ಥಗಿತಗೊಳಿಸಿದ್ದಾರೆ.

Author Image

Advertisement