ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪ್ರದೀಪ್ ಈಶ್ವರ್‌ನನ್ನು ಮೊದಲು ನೋಡಿದಾಗ ಯಾರೋ ಹುಚ್ಚ ಅನ್ಕೊಂಡಿದ್ದೆ; ಡಿ.ಕೆ. ಶಿವಕುಮಾರ್

06:32 PM Jun 22, 2024 IST | Bcsuddi
Advertisement

ಬೆಂಗಳೂರು: ಪ್ರದೀಪ್ ಈಶ್ವರ್‌ನನ್ನು ಮೊದಲು ನೋಡಿದಾಗ ಯಾರೋ ಹುಚ್ಚ ಅನ್ಕೊಂಡಿದ್ದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Advertisement

ಪರಿಶ್ರಮ ನೀಟ್ ಅಕಾಡೆಮಿ- 2024 ಸನ್ಮಾನ ಸಮಾರಂಭದಲ್ಲಿ 2023-24ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ' 'ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಪ್ರದೀಪ್ ಈಶ್ವರ್‌ನನ್ನು ಮೊದಲ ಬಾರಿಗೆ ನನ್ನ ಬಳಿ ಕರೆದುಕೊಂಡು ಬಂದು ನನಗೆ ಪರಿಚಯ ಮಾಡಿಸಿದಾಗ ಯಾರೋ ಹುಚ್ಚನನ್ನ ಕರೆದುಕೊಂಡು ಬಂದಿದಿಯಲ್ಲಯ್ಯ ಎಂದಿದ್ದೆ. ಈತ (ಪ್ರದೀಪ್ ಈಶ್ವರ್) ಉಪಯೋಗಕ್ಕೆ ಬರುತ್ತಾರೆ. ಒಂದು ಅವಕಾಶ ನೀಡಿ ಎಂದು ಎಂ.ಸಿ. ಸುಧಾಕರ್ ಹೇಳಿದ್ದರು.

ಪ್ರದೀಪ್ ಅವರು ಈಗ ರಾಜ್ಯದಲ್ಲೇ ಹೊಸ ಇತಿಹಾಸ ಸೃಷ್ಟಿ ಮಾಡಿ ಶಾಸಕನಾಗಿದ್ದಾರೆ. ವಿಧಾನಸಭೆಯಲ್ಲೂ ತಮ್ಮ ಆಚಾರ, ವಿಚಾರ ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಾನು ಸಣ್ಣ ವಯಸ್ಸಿನಲ್ಲಿ ಮಂತ್ರಿ ಆದೆ ಓದಲು ಆಗಿಲ್ಲ. ಮೂರು ಜನ ಮಕ್ಕಳ ಆದರೂ ಯಾಕೆ ಪದವೀಧರ ಆಗಿಲ್ಲ ಎಂದು ಕೇಳಬಹುದು ಎಂದು ಓಪನ್ ವಿವಿಯಲ್ಲಿ ಓದಿದೆ. 48ನೇ ವಯಸ್ಸಿನಲ್ಲಿ ಪದವೀಧರನಾದೆ. ನಾನು ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಆಗಿರುವ ಸಂತೋಷಕ್ಕಿಂತ ಮೈಸೂರಿನಲ್ಲಿ ಪದವೀಧರ ಸರ್ಟಿಫಿಕೇಟ್ ಇಸ್ಕೊಂಡಾಗ ಆಗಿತ್ತು. ಪ್ರದೀಪ್ ಈಶ್ವರ್ ಬಂದು ಪರಿಶ್ರಮಕ್ಕೆ ಜಾಗ ಕೇಳಿದ್ದರು. ಆಗ ಪೆನ್ನುಪೇಪರ್ ಕೊಟ್ಟೀದ್ದೀರಿ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ ಎಂದು ಹೇಳಿದರು.

Advertisement
Next Article