ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಪ್ರಕೃತಿ ವಿಕೋಪದ ಬಗ್ಗೆ ಈ ಮೊದಲೇ ಕೇರಳ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು'- ಅಮಿತ್ ಶಾ

05:09 PM Jul 31, 2024 IST | BC Suddi
Advertisement

ನವದೆಹಲಿ: ಪ್ರಾಕೃತಿಕ ವಿಕೋಪ ಸಂಭವಿಸುವ ಬಗ್ಗೆ ಕೇರಳ ಸರ್ಕಾರಕ್ಕೆ ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಜುಲೈ 23ಕ್ಕೆ ಎನ್‌ಡಿಆರ್‌ಎಫ್ ತಂಡಗಳು ಕೇರಳಕ್ಕೆ ತೆರಳಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

Advertisement

ಕೇಂದ್ರ ಸರ್ಕಾರದ ಮುನ್ನೆಚ್ಚರಿಕೆ ವ್ಯವಸ್ಥೆ ಮತ್ತು ದುರಂತದ ಪ್ರತಿಕ್ರಿಯೆ ಬಗ್ಗೆ ವಿಪಕ್ಷಗಳು ಟೀಕಿಸಿದ ಹಿನ್ನೆಲೆ, ರಾಜ್ಯ ಸಭೆಯಲ್ಲಿ ಉತ್ತರಿಸಿದ ಅವರು, ಮುಂಚಿತವಾಗಿ ನೀಡಿದ್ದ ಎಚ್ಚರಿಕೆಗೆ ಕೇರಳ ಸರ್ಕಾರ ಕಿವಿಗೊಡಲಿಲ್ಲ. ಕೊನೆ ಪಕ್ಷ ಎನ್‌ಡಿಆರ್‌ಎಫ್ ತಂಡಗಳು ರಾಜ್ಯಕ್ಕೆ ಬಂದಿರುವುದು ಗೊತ್ತಾದರೂ ಎಚ್ಚೆತ್ತುಕೊಳ್ಳಲಿಲ್ಲ. ಈಗ ದುರಂತ ನಡೆದು ಹೋಗಿದೆ. ನರೇಂದ್ರ ಮೋದಿ ಸರ್ಕಾರ ಕೇರಳ ಸರ್ಕಾರದೊಂದಿಗೆ ಬಂಡೆಯಂತೆ ಗಟ್ಟಿಯಾಗಿ ನಿಲ್ಲಲಿದೆ. ಕೇಂದ್ರದಿಂದ ಎಲ್ಲಾ ರೀತಿಯ ನೆರವನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಜುಲೈ 30ರಂದು ಪ್ರಾಕೃತಿಕ ವಿಕೋಪದಿಂದ ಅನಾಹುತ ಸಂಭವಿಸುವ ಸಾಧ್ಯತೆ ಬಗ್ಗೆ 7 ದಿನಗಳ ಹಿಂದೆಯೇ ತಿಳಿಸಲಾಗಿತ್ತು. ಅಲ್ಲದೆ ಜುಲೈ 24ರಂದು ಕೂಡ ಮತ್ತೊಮ್ಮೆ ಎಚ್ಚರಿಸಲಾಗಿತ್ತು. ಜುಲೈ 23ರಂದು 9 ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿತ್ತು. ಎನ್‌ಡಿಆರ್‌ಎಫ್ ತಂಡಗಳನ್ನು ನೋಡಿದ ಮೇಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದರೆ ಸಾವಿನ ಪ್ರಮಾಣವನ್ನು ತಗ್ಗಿಸಬಹುದಿತ್ತು. ನಿನ್ನೆ ರಕ್ಷಣಾ ಕಾರ್ಯಾಚರಣೆಗೆ ಮತ್ತೆ ಮೂರು ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಲಾಗಿದೆ ಎಂದು ಹೇಳಿದರು.

 

Advertisement
Next Article