ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಬರುತ್ತಿವೆ ವಿಚಿತ್ರ ಸುದ್ದಿ..!
ಪ್ಯಾರಿಸ್(ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರಿ ವಿವಾದಕ್ಕೆ ಗುರಿಯಾಗಿತ್ತು. ಇದಕ್ಕಾಗಿ ಒಲಿಂಪಿಕ್ಸ್ ಆಯೋಜಕರು ಕ್ಷಮೆಯಾಚಿಸಿದ್ದರು. ಅಷ್ಟಾದರೂ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ವಿಚಿತ್ರ ಸುದ್ದಿಗಳು ಬರುತ್ತಿವೆ. * ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಕಲಾವಿದ ಲಿಯಾನಾರ್ಡೊ ಡಾವಿಂಚಿ ಅವರ ‘ದಿ ಲಾಸ್ಟ್ ಸಪ್ಪರ್’ ಪೇಟಿಂಗ್ ಅನ್ನು ಡ್ರ್ಯಾಗ್ ಕ್ವೀನ್‌ಗಳಿಂದ ವಿಡಂಬನಾತ್ಮಕವಾಗಿ ಪ್ರದರ್ಶಿಸಿರುವುದು ಕ್ರೈಸ್ತ ಸಮುದಾಯದ ಕೋಪಕ್ಕೆ ಗುರಿಯಾಗಿತ್ತು. * ಜಪಾನಿನ ರಗ್ಬಿ ಆಟಗಾರನ ಮದುವೆಯ ಉಂಗುರ ಕಳ್ಳತನ! * ಆಸ್ಟ್ರೇಲಿಯನ್ ಹಾಕಿ ಕೋಚ್ ಕ್ರೆಡಿಟ್ ಕಾರ್ಡ್ ಕಳ್ಳತನ! * 10 ಆಟಗಾರರಿಗೆ ಕೇವಲ 2 ಸ್ನಾನಗೃಹಗಳನ್ನು ಒದಗಿಸಲಾಗುತ್ತಿದೆ! * ಆಟಗಾರರು ನಾನ್ ಎಸಿ ಬಸ್‌ಗಳಲ್ಲಿ ಪ್ರಯಾಣಿಸಬೇಕು! * ಅಮೇರಿಕನ್ ಆಟಗಾರರು ಮಲಗುವ ಕೋಣೆಗಳನ್ನು ಗೇಲಿ ಮಾಡಿದರು! * ಡೈನಿಂಗ್ ಹಾಲ್ ತಲುಪುವ ಮೊದಲೇ ಆಹಾರ ಮುಗಿದು ಹೋಗುತ್ತಿದೆ! * ಬ್ರಿಟಿಷ್ ಆಟಗಾರರು ತಮ್ಮದೇ ಬಾಣಸಿಗರನ್ನು ಸಹ ಕರೆದಿದ್ದಾರೆ. * ಭಾರತೀಯ ಆಟಗಾರರಿಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ, ಹೊರಗಿನಿಂದ ರೊಟ್ಟಿ ಮತ್ತು ದಾಲ್ ಆರ್ಡರ್ ಮಾಡುತ್ತಿದ್ದಾರೆ! * ಮಹಿಳಾ ಬಾಕ್ಸರ್ ಅನ್ನು ಪುರುಷ ಬಾಕ್ಸರ್ ಜೊತೆ ಹೋರಾಡುವಂತೆ ಮಾಡಲಾಯಿತು.