ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪ್ಯಾರಾಚೂಟ್ ವಿಫಲ: ಪರಿಹಾರ ಪೊಟ್ಟಣ ಜನರ ಮೇಲೆ ಬಿದ್ದು ಐವರ ಮೃತ್ಯು, ಹಲವರಿಗೆ ಗಾಯ

04:31 PM Mar 09, 2024 IST | Bcsuddi
Advertisement

ಗಾಜಾ, : ಗಾಜಾದಲ್ಲಿ ಯುದ್ಧದಿಂದ ಬಳಲುತ್ತಿರುವ ನಾಗರಿಕರಿಗೆ ಏರ್‌ಡ್ರಾಪ್ ಮೂಲಕ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ. ಆದರೆ ಈ ವೇಳೆ ದುರಂತವೊಂದು ಸಂಭವಿಸಿದೆ. ಮಾನವೀಯ ಪರಿಹಾರದ ಭಾಗವಾಗಿ ಪ್ಯಾರಾಚೂಟ್ ಮೂಲಕ ಏರ್‌ಡ್ರಾಪ್‌ ಮೂಲಕ ನಾಗರಿಕರಿಗೆ ಪರಿಹಾರ ಪೊಟ್ಟಣ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಆದರೆ ಪ್ಯಾರಾಚೂಟ್ ವಿಫಲಗೊಂಡು ಪರಿಹಾರ ಪೊಟ್ಟಣಗಳು ಕೆಳಗೆ ನಿಂತ ನಾಗರಿಕರ ಮೇಲೆ ಬಿದ್ದು ಸುಮಾರು ಐದು ಮಂದಿ ಮೃತಪಟ್ಟಿದ್ದಾರೆ ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.

Advertisement

ಗಾಜಾದ ಅತ್ಯಂತ ವಿನಾಶಕಾರಿ ಭಾಗಗಳಲ್ಲಿ ಒಂದಾದ ಅಲ್-ಶಾತಿ ಎಂದು ಕರೆಯಲ್ಪಡುವ ಕರಾವಳಿ ನಿರಾಶ್ರಿತರ ಶಿಬಿರದ ಬಳಿ ಶುಕ್ರವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ಯಾರಾಚೂಟ್ ವಿಫಲಗೊಂಡು ಪರಿಹಾರ ಪೊಟ್ಟಣಗಳು ಕೆಳಗೆ ನಿಂತ ನಾಗರಿಕರ ಮೇಲೆ ಬಿದ್ದು ಸುಮಾರು ಐದು ಮಂದಿ ಮೃತಪಟ್ಟಿದ್ದಾರೆ ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಗಾಜಾ ನಗರದ ನಿರಾಶ್ರಿತರ ಶಿಬಿರದ ಬಳಿ ನಾಗರಿಕರು ಪರಿಹಾರದ ಪ್ಯಾಕೇಜ್‌ಗಳಿಗಾಗಿ ಕಾಯುತ್ತಿದಾಗ ಈ ಅವಘಡ ಸಂಭವಿಸಿದೆ. ಪ್ಯಾರಾಚೂಟ್ ತೆರೆಯದೇ ರಾಕೆಟ್‌ನಂತೆ ಕೆಳಗೆ ಬಿದ್ದಿದ್ದು ಕೆಳಗೆ ಆಹಾರಕ್ಕಾಗಿ ಕಾಯುತ್ತಿದ್ದ ಐದು ಮಂದಿ ಮೃತಪಟ್ಟಿದ್ದಾರೆ.

Advertisement
Next Article