ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪ್ಯಾರಸಿಟಮಾಲ್, ಪ್ಯಾಂಟೊಪ್ರಜೋಲ್ ಸೇರಿ 52 ಔಷಧಿಗಳ ಗುಣಮಟ್ಟ ಕಳಪೆ

10:22 AM Jun 26, 2024 IST | Bcsuddi
Advertisement

ನವದೆಹಲಿ: ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಸಿಟಮಾಲ್, ಪ್ಯಾಂಟೊಪ್ರಜೋಲ್ ಮತ್ತು ಕೆಲವು ಆ್ಯಂಟಿಬಯೊಟಿಕ್ಸ್ ಸೇರಿದಂತೆ 52 ಔಷಧಿಗಳ ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.

Advertisement

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಶೇಷನ್ (ಸಿಡಿಎಸ್ಸಿಒ) ಇತ್ತಿಚೇಗೆ ವರದಿಯನ್ನು ಬಿಡುಗಡೆ ಮಾಡಿದ್ದು, 52 ಔಷಧಿಗಳು ಪರೀಕ್ಷೆಯಲ್ಲಿ ನಿರೀಕ್ಷಿತ ಗುಣಮಟ್ಟ ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿದುಬಂದಿದೆ.ಸಿಡಿಎಸ್ಸಿಒ ಪ್ರಮುಖ ಔಷಧ ನಿಯಂತ್ರಕ ಸಂಸ್ಥೆಯಾಗಿದ್ದು, ಇದು ಔಷಧಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ. ಈ ಕಳಪೆ ಔಷಧಗಳ ಪೈಕಿ 22 ಔಷಧಗಳನ್ನು ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗುತ್ತದೆ.

ಹಿಮಾಚಲ ಪ್ರದೇಶವಲ್ಲದೆ, ಗುಜರಾತ್, ಆಂಧ್ರಪ್ರದೇಶ ಮತ್ತು ಇಂದೋರ್‌ನ ಜೈಪುರ, ಹೈದರಾಬಾದ್, ವಘೋಡಿಯಾ ಮತ್ತು ವಡೋದರಾದಿಂದ ಸ್ಯಾಂಪಲ್ ಸಂಗ್ರಹಿಸಲಾಗಿದೆ.

ಜೂನ್ 20 ರಂದು ನೀಡಲಾದ ಡ್ರಗ್ ಅಲರ್ಟ್ ಪ್ರಕಾರ ಸಿಡಿಎಸ್‌ಸಿಒ ನಡೆಸಿದ ಗುಣಮಟ್ಟ ಪರೀಕ್ಷೆಯಲ್ಲಿ ಒಟ್ಟು 52 ಮಾದರಿಗಳು ವಿಫಲವಾಗಿವೆ.

 

Advertisement
Next Article