ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪೌರತ್ವ ಕಾನೂನಿನಿಂದ ನಿರಾಶ್ರಿತರಿಗೆ ಘನತೆಯ ಜೀವನ - ರಾಷ್ಟ್ರಪತಿ ದ್ರೌಪದಿ ಮುರ್ಮು

02:21 PM Jun 27, 2024 IST | Bcsuddi
Advertisement

ನವದೆಹಲಿ : ಕೇಂದ್ರ ಸರ್ಕಾರವು ಪೌರತ್ವ ಕಾನೂನಿನಡಿ ನಿರಾಶ್ರಿತರಿಗೆ ಘನತೆಯ ಜೀವನವನ್ನು ಖಾತ್ರಿಪಡಿಸಿದೆ ಎಂದು ಸಿಎಎ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಸರ್ಕಾರದ ಆದ್ಯತೆಗಳನ್ನು ಸಂಸತ್ತಿನ ಮುಂದೆ ಇಟ್ಟರು. 18ನೇ ಲೋಕಸಭೆಗೆ ಹೊಸದಾಗಿ ಆಯ್ಕೆಯಾದ ಎಲ್ಲ ಸದಸ್ಯರನ್ನು ಅಭಿನಂದಿಸಿದರು. ಸಿಎಎ ಕಾನೂನನ್ನು ಉಲ್ಲೇಖಿಸಿದರು. ವಿಭಜನೆಯಿಂದ ಬಾಧಿತರಾದ ಅನೇಕ ಕುಟುಂಬಗಳು ಘನತೆಯಿಂದ ಬದುಕುವುದನ್ನು ಇದು ಖಾತ್ರಿಪಡಿಸಿದೆ ಎಂದು ಹೇಳಿದರು. "ನನ್ನ ಸರ್ಕಾರ ಸಿಎಎ ಕಾನೂನಿನ ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವ ನೀಡಲು ಪ್ರಾರಂಭಿಸಿದೆ. ಇದು ವಿಭಜನೆಯಿಂದ ಬಾಧಿತವಾದ ಅನೇಕ ಕುಟುಂಬಗಳಿಗೆ ಘನತೆಯ ಜೀವನವನ್ನು ಖಾತ್ರಿಪಡಿಸಿದೆ. ಸಿಎಎ ಅಡಿಯಲ್ಲಿ ಪೌರತ್ವ ಪಡೆದ ಕುಟುಂಬಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ನಾನು ಬಯಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

Advertisement

Advertisement
Next Article