ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪೋಷಕರೇ ಎಚ್ಚರ: ಹೆಚ್ಚು ಫೋನ್ ಬಳಕೆಯಿಂದ ಮಕ್ಕಳಲ್ಲಿ ಮಯೋಪಿಯಾ ಡಿಸೀಜ್ ಪತ್ತೆ..!

09:24 AM Jul 19, 2024 IST | Bcsuddi
Advertisement

ಇತ್ತೀಚಿನ ದಿನಗಳಲ್ಲಿ ಮಕ್ಕಳು ಊಟ ಬಿಟ್ಟರು ಮೊಬೈಲ್ ಬಿಡಲ್ಲ ಅಂತಿದ್ದಾರೆ. ಹೊರಗಡೆ ಹೋಗಿ ಕ್ರಿಕೆಟ್, ಪುಟ್‌ಬಾಲ್ ಇನ್ನಿತರ ಆಟವಾಡಿ ದೈಹಿಕವಾಗಿ ಸದೃಢವಾಗುವ ವಯಸ್ಸು, ಅದರೆ ಇಂತಹ ದೈಹಿಕ ಶಕ್ತಿ ಹೆಚ್ಚಿಸುವ ಆಟಗಳನ್ನು ಆಡುವ ಬದಲಿಗೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಮಕ್ಕಳು ಆಟ ಆಡುತ್ತಿದ್ದಾರೆ. ಮಕ್ಕಳ ಮೊಬೈಲ್ ಸ್ಕ್ರೀನಿಂಗ್ ಟೈಮ್ ಏರಿಕೆಯಿಂದ ಅತಿಯಾದ ಮೊಬೈಲ್ ಗೀಳಿನಿಂದ ಮಕ್ಕಳಿಗೆ ಮಯೋಪಿಯಾ ಡಿಸೀಜ್ (Myopia disease) ಶುರುವಾಗಿದ್ದು ವೈದ್ಯರು ಅಚ್ಚರಿಯ ಅಂಶ ಹೊರ ಹಾಕಿದ್ದಾರೆ. ಕೊವಿಡ್ ನಂತರ ಮಕ್ಕಳ ಆರೋಗ್ಯ ಬಗ್ಗೆ ನೀವೆಷ್ಟು ಕಾಳಜಿ ವಹಿಸಿದ್ದೀರಿ? ನಿಮ್ಮ ಮಕ್ಕಳ ಆರೋಗ್ಯ ಬೆಳವಣಿಗೆ ಬಗ್ಗೆ ಅದೆಷ್ಟು ಫಾಲೋ ಮಾಡ್ತಾ ಇದ್ದೀರಿ? ಹೀಗ್ಯಾಕೆ ಕೇಳ್ತಾ ಇದ್ದೀವಿ ಅಂದ್ರೆ, ಇತ್ತೀಚಿಗೆ ಮಕ್ಕಳಲ್ಲಿ ನಿರಂತರ ಮೊಬೈಲ್ ಬಳಕೆ ನಾನಾ ಅವಾಂತರಕ್ಕೆ ಕಾಣವಾಗುತ್ತಿದೆ. ಸದ್ಯ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಸ್ ಶುರುವಾಗಿದೆ ಮಯೋಪಿಯಾ ಡಿಸೀಸ್ ಏರಿಕೆಗೆ ವೈದ್ಯರೇ ಶಾಕ್ ಆಗಿದ್ದು ಬೆಂಗಳೂರಿನ ಖ್ಯಾತ ನೇತ್ರ ತಜ್ಞರ ಸಂಶೋಧನೆಯಲ್ಲಿ ಆತಂಕಕಾರಿ ಅಂಶ ಬಯಲಾಗಿದೆ. ಮಯೋಪಿಯಾ ಡಿಸೀಜ್‌ನಿಂದ ಮುಂದಿನ ದಿನಗಳಲ್ಲಿ ಶೇ 50% ರಿಂದ 60 ರಷ್ಟು ಮಕ್ಕಳಿಗೆ ದೃಷ್ಟಿ ದೋಷ ಸಮಸ್ಯೆ ಕಾಡಲಿದೆಯಂತೆ. ಈ ಅಚ್ಚರಿಯ ಅಂಶ ಹೊರ ಹಾಕಿರುವ ಖ್ಯಾತ ನೇತ್ರ ತಜ್ಞರು ನಿಮ್ಮ ಮಕ್ಕಳ ಕಣ್ಣಿನ ರಕ್ಷಣೆ ನಿಮ್ಮ ಕೈಯಲ್ಲಿದೆ ಅಂತಾ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಕೊವಿಡ್ ಬಳಿಕ ಮಕ್ಕಳ ಮೊಬೈಲ್ ಸ್ಕ್ರೀನಿಂಗ್ ಟೈಮ್ ಹೆಚ್ಚಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಸ್ ಕಂಡು ಬರ್ತಿದೆ. ಈ ಡಿಸೀಸ್‌ನಿಂದ ಕಣ್ಣಿನ ಸಮಸ್ಯೆ ಕಂಡು ಬರ್ತಿದೆ. ಶಾಶ್ವಾತ ದೃಷ್ಟಿದೋಷದಂತ ಸಮಸ್ಯೆ ಮಕ್ಕಳಿಗೆ ಬರ್ತಿವೆ. ಹೀಗಾಗಿ ಮೊಬೈಲ್ ಸ್ಕ್ರೀನಿಂಗ್ ಕಡಿಮೆ ಮಾಡುವಂತೆ ವೈದ್ಯರಿಂದ ಟೈಂ ಟೇಬಲ್ ನೀಡುವಂತೆ ಯಾವ ಯಾವ ಟೈಂನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಬೇಕು ಎಂದು ರಿಸರ್ಚ್ ಮಾಡಿದ್ದು, ದಿನೇ ದಿನೇ ಹೆಚ್ಚುತ್ತಿರುವ ಮೊಬೈಲ್ ಸ್ಕ್ರೀನಿಂಗ್ ಸಮಸ್ಯೆಗೆ ಸೂಕ್ತ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

Advertisement

Advertisement
Next Article