For the best experience, open
https://m.bcsuddi.com
on your mobile browser.
Advertisement

ಪೋರ್ಷೆ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ : ರಕ್ತದ ಮಾದರಿ ವರದಿ ತಿರುಚಿದ್ದ ಇಬ್ಬರು ವೈದ್ಯರ ಬಂಧನ

10:03 AM May 27, 2024 IST | Bcsuddi
ಪೋರ್ಷೆ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್   ರಕ್ತದ ಮಾದರಿ ವರದಿ ತಿರುಚಿದ್ದ ಇಬ್ಬರು ವೈದ್ಯರ ಬಂಧನ
Advertisement

ಪುಣೆ: ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ ಅಪ್ರಾಪ್ತ ವೇದಾಂತ್​ ಅಗರ್ವಾಲ್ ರಕ್ತದ ಮಾದರಿಯನ್ನು ತಿರುಚಿದ ಆರೋಪದ ಮೇಲೆ ಪುಣೆಯ ಸಾಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಸೋಮವಾರ ತಿಳಿಸಿದ್ದಾರೆ.

ಪುಣೆಯಲ್ಲಿ 17 ವರ್ಷದ ಬಾಲಕ ವೇದಾಂತ್ ಅಗರ್ವಾಲ್​ ಐಷಾರಾಮಿ ಪೋರ್ಷೆ ಕಾರನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡು ಹೋಗಿ ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಪುಣೆಯ ಸಸೂನ್ ಆಸ್ಪತ್ರೆಯ ಫೋರೆನ್ಸಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಅಜಯ್ ತಾವರೆ ಮತ್ತು ಸಾಸೂನ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಶ್ರೀಹರಿ ಹಾರ್ನರ್ ಅವರನ್ನು ಪೋರ್ಷೆ ಅಪಘಾತ ಪ್ರಕರಣದಲ್ಲಿ ರಕ್ತದ ವರದಿ ಮತ್ತು ಸಾಕ್ಷ್ಯವನ್ನು ತಿರುಚಿರುವ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಅಮಿತೇಶ್ ಕುಮಾರ್ ಹೇಳಿದ್ದಾರೆ.

Advertisement

ಪುಣೆ ಪೋರ್ಷೆ ಅಪಘಾತ ಪ್ರಕರಣವನ್ನು ಪ್ರಸ್ತುತ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಮೇ 19 ರ ಮುಂಜಾನೆ ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಷೆ ಕಾರು ಢಿಕ್ಕಿಯಾಗಿ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಅಪ್ರಾಪ್ತನ ರಕ್ತದ ಮಾದರಿಗಳನ್ನು ಸಂಗ್ರಹಿಸುವಲ್ಲಿ ವಿಳಂಬವಾಗಿದೆ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ. ಅಪಘಾತಕ್ಕೂ ಮುನ್ನ ಅಪ್ರಾಪ್ತರು ಎರಡು ಪಬ್‌ಗಳಲ್ಲಿ ಮದ್ಯ ಸೇವಿಸಿದ್ದರು. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ರಾತ್ರಿ 11 ಗಂಟೆಗೆ ರಕ್ತದ ಮಾದರಿ ತೆಗೆದುಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇನ್ನೊಂದೆಡೆ ಬಾಲಕ ನ ಅಜ್ಜನನ್ನು ಬಂಧಿಸಲಾಗಿದೆ. ಕುಟುಂಬದ ಚಾಲಕನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡ ಮತ್ತು ಅಪಘಾತದ ಹೊಣೆಯನ್ನು ಹೊತ್ತುಕೊಳ್ಳುವಂತೆ ಆತನಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಅಜ್ಜ ಸುರೇಂದ್ರ ಕುಮಾರ್ ಅಗರವಾಲ್ ಬಂಧನ ನಡೆದಿದೆ. ಅಜ್ಜನ ವಿರುದ್ಧ ಪೊಲೀಸರು ಅಪಹರಣ ಮತ್ತು ಅಕ್ರಮ ಬಂಧನದ ಆರೋಪದಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Author Image

Advertisement