ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಪೆನ್ ಡ್ರೈವ್ ವಿತರಣೆ ಹಿಂದೆ ದೇವರಾಜೇಗೌಡ, ಶಿವರಾಮೇಗೌಡ, ಡಿಕೆಶಿ ಇದ್ದಾರೆ'- ಹೆಚ್‌ಡಿಕೆ ಆರೋಪ

01:06 PM May 22, 2024 IST | Bcsuddi
Advertisement

ಮೈಸೂರು: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಡಿಕೆ ಸಹೋದರ ವಿರುದ್ಧ ಆರೋಪ ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‍ಡ್ರೈವ್ ಪ್ರಕರಣದಲ್ಲಿ ಡಿಕೆ ಸಹೋದರ ಕೈವಾಡ ಇದೆ. ರೇವಣ್ಣ ಮನೆಯಲ್ಲಿ ಕೆಲಸಕ್ಕೆ ಇದ್ದ ಕಾರ್ತಿಕನೇ ಇದರ ಮೂಲ. ಡಿಕೆಶಿ ಮನೆಯಲ್ಲಿ ಪೆನ್‍ಡ್ರೈವ್‍ನ ಟ್ರಾನ್ಸ್ ಫರ್ ಮಾಡಿಕೊಂಡಿದ್ದಾನೆ. ಸಮಯ ಬಂದಾಗ ಉಪಯೋಗ ಮಾಡಿಕೊಳ್ಳೋಣ ಅಂತ ಕಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪೆನ್ ಡ್ರೈವ್ ವಿತರಣೆ ಹಿಂದೆ ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಇದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ? ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧಿಸಿಲ್ಲ? ಕೋರ್ಟ್ ಗೆ ಹಾಜರುಪಡಿಸಿಲ್ಲ ಹೇಳಿ? ಎಂದು ಕಿಡಿಕಾರಿದ್ದಾರೆ.

ನನ್ನ ಬಳಿ ಇರುವ ಪೆನ್ ಡ್ರೈವ್ ನಿಮ್ಮ ಸರ್ಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು. ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಎಂದು ಬೇಕಾದರೆ ನೀವು ಹೇಳ್ತೀರಿ ಎಂದರು.ಈಗ ಸಿಎಂ ಪೆನ್ ಡ್ರೈವ್ ಬಗ್ಗೆ  ಯಾರು ಮಾತಾಡಬೇಡಿ ಅಂದಿದ್ದಾರೆ. ಏಕೆಂದರೆ ನಿಮ್ಮ ಬುಡಕ್ಕೆ ಬರ್ತಾ ಇದೆಯಲ್ಲ. ಅದಕ್ಕೆ ಈಗ ಮಾತಾಡಬೇಡಿ ಅಂತಿದ್ದಾರೆ ಎಂದು ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.ನಾನು ಪ್ರಜ್ವಲ್ ಪರವಾಗಿ ಇಲ್ಲ. ಆತನ ಅಪರಾಧ ಸಾಬೀತಾದರೆ ಶಿಕ್ಷೆ ಕೊಡಿ ಎಂದು ಹೇಳಿದರು.

ಸಿಎಂ ಅವರೇ ಅಧಿಕಾರ ಶಾಶ್ವತ ಅಲ್ಲ. ನಿಮ್ಮ ಅಧಿಕಾರ ದುರುಪಯೋಗ ದ ವಿರುದ್ದ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಹರಿಹಾಯ್ದರು.

 

Advertisement
Next Article