For the best experience, open
https://m.bcsuddi.com
on your mobile browser.
Advertisement

ಪೆನ್ ಡ್ರೈವ್ ಬ್ರದರ್ ’ಹೆಚ್ ಡಿಕೆ ವಿರುದ್ಧ ಮತ್ತೊಂದು ಪೋಸ್ಟರ್ ವಾರ್‌

12:06 PM Nov 21, 2023 IST | Bcsuddi
ಪೆನ್ ಡ್ರೈವ್ ಬ್ರದರ್ ’ಹೆಚ್ ಡಿಕೆ ವಿರುದ್ಧ ಮತ್ತೊಂದು ಪೋಸ್ಟರ್ ವಾರ್‌
Advertisement

ಬೆಂಗಳೂರು: ಇತ್ತೀಚೆಗೆ ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿ ವಾಗ್ದಾಳಿ ನಡೆಸುತ್ತಿದ್ದರು. ಇದೀಗ ರಾಜಕೀಯ ರಂಗದಲ್ಲಿ ಪೋಸ್ಟರ್‌ ವಾರ್‌ ಶುರುವಾಗಿದೆ. ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಮತ್ತೊಂದು ಪೋಸ್ಟರ್‌ ಕಂಡು ಬಂದಿದೆ.

ಹೆಚ್ ಡಿಕೆ ಆರೋಪಗಳಿಂದ ಆಕ್ರೋಶಿತರಾದ ಕೆಲ ದುಷ್ಕರ್ಮಿಗಳು ಸಿನಿಮಾ ಮಾದರಿಯ ಪೋಸ್ಟರ್ ಅಂಟಿಸಿದ್ದು, ಇದು ವೈರಲ್ ಆಗುತ್ತಿದೆ.ಹೆಚ್ ಡಿಕೆ ಆರೋಪಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಡಿಕೆಶಿ ಕೂಡ ಹೆಚ್ ಡಿಕೆ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.

ಆದರೆ ಕೆಲ ದುಷ್ಕರ್ಮಿಗಳು ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಪೋಸ್ಟರ್ ಅಂಟಿಸಿ ಹೆಚ್ ಡಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಗೋಡೆಗಳ ಮೇಲೆ ಅಂಟಿಸಲಾಗಿದ್ದ ಪೋಸ್ಟರ್ ವಾರ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣ ಪೋಸ್ಟರ್ಸ್ ಗಳಿಗಾಗಿ ಹುಡುಕಾಟ ನಡೆಸಿದ್ದಾರೆ.ಆದರೆ ಎಲ್ಲಿಯೂ ಪೋಸ್ಟರ್ಸ್ ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

Advertisement

ಇನ್ನು ಹೆಚ್ ಡಿಕೆ ವಿರುದ್ಧದ ಈ ಪೋಸ್ಟರ್ ನಲ್ಲಿ ಕರೆಂಟ್ ಕಳ್ಳ ಖ್ಯಾತಿಯ ಹೆಚ್​ಡಿಕೆ ನಿರ್ಮಾಣದ ಚಿತ್ರ “ಪೆನ್ ಡ್ರೈವ್ ಬ್ರದರ್”. ನಿರ್ದೇಶನ ಪ್ರಾಮಾಣಿಕ ಖ್ಯಾತಿಯ ಕರೆಂಟ್ ಕಳ್ಳ. ಬರೀ ಟೀಸರ್​ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ ಸಿನಿಮಾ ಇನ್ನೂ ಬಾಕಿಯಿದೆ. ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ. ಚಿತ್ರದ ನಿರ್ಮಾಣದ ವೆಚ್ಚ 68000 ಎಂದು ವ್ಯಂಗ್ಯವಾಡಿದೆ.

Author Image

Advertisement