ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಪೆನ್ ಡ್ರೈವ್ ಕೇಸ್ ನಲ್ಲಿ ಬಂಧನ ಆಗಿರುವುದು ನನ್ನ ಪಿಎ ಅಲ್ಲ'- ಪ್ರೀತಂಗೌಡ

04:54 PM May 13, 2024 IST | Bcsuddi
Advertisement

ಬೆಂಗಳೂರು: ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಆಗಿರುವುದು ನನ್ನ ಪಿಎ ಅಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ತಿಳಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಯುತ್ತಿರುವಾಗ ಪ್ರಕರಣದ ಬಗ್ಗೆ ಮಾತಾಡುವುದು ಸರಿಯಲ್ಲ. ಯಾರು ಏನು ಮಾಡಿದ್ದಾರೆ ಎಂದು ತನಿಖೆಯ ಮೂಲಕ ತಿಳಿಯುತ್ತದೆ. ಯಾವುದೇ ಕಾರಣಕ್ಕೂ ಅಶ್ಲೀಲ ವೀಡಿಯೋಗಳನ್ನು ಇಟ್ಟುಕೊಳ್ಳಬೇಡಿ. ಇನ್ನೊಬ್ಬರಿಗೆ ಕಳುಹಿಸಬೇಡಿ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೆ. ಇಂದಿನವರೆಗೂ ಜವಾಬ್ದಾರಿಯುತ ವ್ಯಕ್ತಿಯಾಗಿ ನಡೆದುಕೊಂಡಿದ್ದೇನೆ ಎಂದಿದ್ದಾರೆ.

ಹಾಸನದಲ್ಲಿ 2 ಲಕ್ಷ ಮೊಬೈಲ್ ಇದ್ದರೆ ಎಲ್ಲಾ ಮೊಬೈಲ್ ನಲ್ಲೂ ಇರುತ್ತದೆ. ಇದರಲ್ಲಿ ಯಾವ ಅನುಮಾನ ಬೇಡ. ಯಾಕೆಂದರೆ ಯಾರು ಬೇಕು ಅಂತಾ ತರಿಸಿಕೊಂಡಿರುವುದಿಲ್ಲ. ನನ್ನ ಕಚೇರಿಯಲ್ಲಿ 40-50ಕ್ಕಿಂತ ಅಧಿಕ ಮಂದಿ ಕೆಲಸ ಮಾಡುತ್ತಾರೆ. ಒಬ್ಬ ಪೆನ್ ಡ್ರೈವ್ ನಲ್ಲಿ ಹಾಕಿ ನೋಡಿದರೆ ಅಪರಾಧ ಅಂದರೆ ಹೇಗಾಗುತ್ತದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಎಸ್ಐಟಿ ಇದೇ ಆಧಾರದ ಮೇಲೆ ತನಿಖೆ ಮಾಡುವುದಾದರೆ ಜಿಲ್ಲೆಯಲ್ಲಿ 15 ಲಕ್ಷ ಮೊಬೈಲ್ ಬಳಕೆದಾರರು ತಪ್ಪಿತಸ್ಥರಾಗುತ್ತಾರೆ. ನಮ್ಮ ಕಚೇರಿಯಲ್ಲಿ ಸಂಬಳಕ್ಕೆ ಕೆಲಸ ಮಾಡುವವರು ಇದ್ದಾರೆ. ವಾಲಂಟರಿಯಾಗಿ ಕೆಲಸ ಮಾಡುವವರೂ ಇದ್ದಾರೆ. ಏಪ್ರಿಲ್ 23ರಂದು ಲಾಯರ್ ಪೆನ್ ಡ್ರೈವ್ ತಂದು ಕೊಟ್ಟಿದ್ದಾರೆ. ಹಾಗಂತ ಲಾಯರ್ ಮೇಲೆ ಕೇಸ್ ದಾಖಲಿಸಲು ಸಾಧ್ಯಾನಾ ಎಂದಿದ್ದಾರೆ. ನಾನು ಯಾರಿಗೂ ವಕ್ತಾರ ಆಗಲು ರೆಡಿ ಇಲ್ಲ. ಸಂತ್ರಸ್ತರ ವಿಡಿಯೋ ಹರಿಬಿಡಬಾರದು ಎಂಬುದೇ ನನ್ನ ನಿಲುವು ಎಂದರು.

 

Advertisement
Next Article