For the best experience, open
https://m.bcsuddi.com
on your mobile browser.
Advertisement

ಪಿ.ಲಂಕೇಶ್ ಕೃತಿಗಳ ಅಧ್ಯಯನ ಶಿಬಿರ: ಅರ್ಜಿ ಆಹ್ವಾನ

08:02 AM Aug 10, 2024 IST | BC Suddi
ಪಿ ಲಂಕೇಶ್ ಕೃತಿಗಳ ಅಧ್ಯಯನ ಶಿಬಿರ  ಅರ್ಜಿ ಆಹ್ವಾನ
Advertisement

ಚಿತ್ರದುರ್ಗ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಜಾಣ-ಜಾಣೆಯರ ವೇದಿಕೆ ಬೆಂಗಳೂರು ಇವರ ಸಹಯೋಗದಲ್ಲಿ 2024ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ ಪಿ.ಲಂಕೇಶ್ ಕೃತಿಗಳ ಅಧ್ಯಯನ ಶಿಬಿರವನ್ನು ನಡೆಸಲು ಉದ್ದೇಶಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತಿ ಇರುವ 20 ರಿಂದ 40 ವರ್ಷ ವಯಸ್ಸುಳ್ಳ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 2024ರ ಆಗಸ್ಟ್ 17 ಕೊನೆಯ ದಿನ. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್  http://karnatakasahithyaacademy.org        ಇಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್  ಎನ್.ಕರಿಯಪ್ಪ ತಿಳಿಸಿದ್ದಾರೆ.

Advertisement

Tags :
Author Image

Advertisement