ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಾರ್ಕಿಂಗ್ ಕಿರಿಕ್ - ದಿ ವಿಲನ್ ನಟಿ ಶರಣ್ಯಾ ಪೊನ್ವಣ್ಣನ್ ವಿರುದ್ಧ ದೂರು ದಾಖಲು

01:34 PM Apr 02, 2024 IST | Bcsuddi
Advertisement

ಚೆನ್ನೈ : ಪಾರ್ಕಿಂಗ್ ವಿಚಾರವಾಗಿ ಬಹುಭಾಷಾ ನಟಿ ಶರಣ್ಯಾ ಪೊನ್ವಣ್ಣನ್ ವಿರುದ್ಧ ದೂರು ದಾಖಲಾಗಿದೆ. ನೆರೆಹೊರೆಯವರೊಂದಿಗೆ ಪಾರ್ಕಿಂಗ್ ವಿಚಾರವಾಗಿ ನಟಿ ಶರಣ್ಯಾ ಜಗಳವಾಡಿದ್ದರು. ಈ ಪ್ರಕರಣ ಮುದರಿ ಪೊಲೀಸ್ ಠಾಣೆ ತಲುಪಿತ್ತು. ಶರಣ್ಯಾ ಪೊನ್ವಣ್ಣನ್ ವಿರುದ್ಧ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಶರಣ್ಯಾ ಪೊನ್ವಣ್ಣನ್ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶ್ರೀದೇವಿ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಚೆನ್ನೈನಲ್ಲಿರುವ ಶರಣ್ಯ ನಿವಾಸ ವಿರುಂಗಬಕ್ಕಂನಲ್ಲಿ ವಾಹನ ನಿಲುಗಡೆ ವಿಚಾರವಾಗಿ ಜಗಳ ನಡೆದಿದೆ. ಇದೀಗ ವಿಷಯ ಪೊಲೀಸರ ಮೊರೆ ಹೋಗಿದ್ದು, ತನಿಖೆ ನಡೆಸುತ್ತಿದ್ದಾರೆ. ಶರಣ್ಯ ಪೊನ್ವಣ್ಣನ್ ತಮಿಳು, ತೆಲುಗು ಮತ್ತು ಮಲಯಾಳಂ ಮತ್ತು ಕೆಲವು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ದಿ ವಿಲನ್​, ಯಕ್ಷ ಹೀಗೆ ಅನೇಕ ಕನ್ನಡ ಸಿನಿಮಾಗಳಲ್ಲಿ ತಾಯಿ ಪಾತ್ರ ಮಾಡುವ ಮೂಲಕವಾಗಿ ಕನ್ನಡದ ಪ್ರೇಕ್ಷಕರಿಗೂ ಚಿರಪರಿಚಿತರು. ನಟಿ ಇದೀಗ ವಿವಾದದಲ್ಲಿ ಸಿಲುಕಿದ್ದಾಳೆ. ಪಾರ್ಕಿಂಗ್ ವಿವಾದ ಪೊಲೀಸ್ ಠಾಣೆಯವರೆಗೂ ಹೋಗಿದೆ.

Advertisement

Advertisement
Next Article