ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಾನ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ 10 ಸಾವಿರ ರೂ. ದಂಡ...!

12:40 PM Feb 19, 2024 IST | Bcsuddi
Advertisement

Pan Card Rules And Regulations: ದೇಶದ ಜನರು ಅಗತ್ಯವಾಗಿ ಬಳಸುವ ಒಂದು ID Card ಗಳಲ್ಲಿ Pan Card ಕೂಡ ಒಂದು. ಅಗತ್ಯ ಹಣದ ವ್ಯವಹಾರಗಳನ್ನ ಮಾಡಲು ಮತ್ತು ತೆರಿಗೆ ಪಾವತಿಸಲು ಈ ಪಾನ್ ಕಾರ್ಡ್ ಬಹಳ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಪಾನ್ ಕಾರ್ಡ್ ಇಲ್ಲದೆ ಕೆಲವು ಅಗತ್ಯ ಹಣಕಾಸಿನ ವ್ಯವಹಾರಗಳನ್ನ ಮಾಡಲು ಸಾಧ್ಯವಿಲ್ಲ.

Advertisement

ಹೌದು ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟ ಎಲ್ಲಾ ಜನರು ಪಾನ್ ಕಾರ್ಡ್ ಮಾಡಿಸುತ್ತಾರೆ ಮತ್ತು ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆ ಸೇರಿದಂತೆ ಕೆಲವು ಅಗತ್ಯ ಕೆಲಸಗಳಿಗೆ Pan Card ಬಹಳ ಅವಶ್ಯಕ ಕೂಡ ಆಗಿದೆ. ದೇಶದಲ್ಲಿ ಪಾನ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಜಾರಿಯಲ್ಲಿ ಇದ್ದು ಅದೆಷ್ಟೋ ಜನರಿಗೆ ಈ ನಿಯಮಗಳ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ.

ಪಾನ್ ಕಾರ್ಡ್ ಹೊಂದಿರುವ ಈ ಜನರಿಗೆ 10000 ರೂ ದಂಡ
*ಆದಾಯ ತೆರಿಗೆ ಇಲಾಖೆ ನಿಯಮದ ಪ್ರಕಾರ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದವರಿಗೆ 10 ಸಾವಿರ ದಂಡ ವಿಧಿಸಲಾಗುತ್ತದೆ.

*ಮದುವೆಯ ನಂತರ ಮಹಿಳೆಯರು ತಮ್ಮ ಪಾನ್ ಕಾರ್ಡ್ ನ ಉಪನಾಮವನ್ನು ಬದಲಾಯಿಸುತ್ತಾರೆ.

*ಕೆಲವರು ವಂಚನೆಗಾಗಿ ಅನೇಕ ಪಾನ್ ಕಾರ್ಡ್ ಗಳನ್ನ ಇಟ್ಟುಕೊಂಡಿರುತ್ತಾರೆ, ಇದು ಕಾನೂನು ಬಾಹಿರವಾಗಿದೆ.

ಆನ್ ಲೈನ್ ಅಲ್ಲಿ ಪಾನ್ ಕಾರ್ಡ್ ಸರೆಂಡರ್ ಮಾಡುವ ವಿಧಾನ
ನೀವು ಪಾನ್ ಬದಲಾವಣೆಯ ವಿನಂತಿಯ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ವಿಭಾಗ 11 ರಲ್ಲಿ ನೀವು ಎರಡನೇ PAN ನ ವಿವರಗಳನ್ನು ನೀಡಬೇಕು. ಇದರ ಪ್ರತಿಯನ್ನು ಸಹ ಲಗತ್ತಿಸಬೇಕು ಮತ್ತು ನಂತರ NSDL ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಲ್ಲಿಸಬೇಕು.

ಆಫ್ ಲೈನ್ ಅಲ್ಲಿ ಪಾನ್ ಕಾರ್ಡ್ ಸರೆಂಡರ್ ಮಾಡುವ ವಿಧಾನ
ನೀವು ಫಾರ್ಮ್ 49A ಅನ್ನು ಭರ್ತಿ ಮಾಡಬೇಕು. ಫಾರ್ಮ್ ನಲ್ಲಿ ಸರೆಂಡರ್ ಮಾಡಬೇಕಾದ ಪಾನ್ ಕಾರ್ಡ್‌ ನ ವಿವರಗಳನ್ನು ನಮೂದಿಸಿ ಮತ್ತು ಈ ಫಾರ್ಮ್ ಅನ್ನು ನಿಮ್ಮ ಹತ್ತಿರದ UTI ಅಥವಾ NSDL TIN ಫೆಸಿಲಿಟೇಶನ್ ಸೆಂಟರ್‌ಗೆ ಸಲ್ಲಿಸಬೇಕು

Advertisement
Next Article