For the best experience, open
https://m.bcsuddi.com
on your mobile browser.
Advertisement

ಪಾಕ್ ನಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ

09:59 PM Mar 03, 2024 IST | Bcsuddi
ಪಾಕ್ ನಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ
Advertisement

ಲಾಹೋರ್: ಭಾರತದ ಮೋಸ್ಟ್ ವಾಂಟೆಡ್ ಉಗ್ರ ಶೇಖ್ ಜಮೀಲ್-ಉರ್-ರೆಹಮಾನ್ ಪಾಕ್ ನಲ್ಲಿ ನಿಗೂಢವಾಗಿ ಹತ್ಯೆಯಾಗಿದ್ದಾನೆ ಎನ್ನಲಾಗಿದೆ.

ಉಗ್ರ ಶೇಖ್ ಜಮೀಲ್-ಉರ್-ರೆಹಮಾನ್ ಪಾಕಿಸ್ತಾನ ಮೂಲದ ಭಯೋತ್ಪಾದಕ ಕಮಾಂಡರ್ ಖೈಬರ್ ಪಖ್ತುಂಖ್ವಾದ ಅಬೋಟಾಬಾದ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈತ ಯುನೈಟೆಡ್ ಜಿಹಾದ್ ಕೌನ್ಸಿಲ್ (ಯುಜೆಸಿ)ಯ ಸ್ವಯಂ-ಘೋಷಿತ ಪ್ರಧಾನ ಕಾರ್ಯದರ್ಶಿ ರೆಹಮಾನ್ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದವನಾಗಿದ್ದಾನೆ.

ಮೂಲತಃ ಪುಲ್ವಾಮಾದವನಾದ ರೆಹಮಾನ್, ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳನ್ನು ಸಂಘಟಿಸಿದ ನಂತರ ಪಾಕ್ ಗೆ ಸ್ಥಳಾಂತರಗೊಂಡಿದ್ದ. 2022ರ ಅಕ್ಟೋಬರ್ ನಲ್ಲಿ ಭಾರತ ಸರ್ಕಾರ ರೆಹಮಾನ್ ನನ್ನು ಭಯೋತ್ಪಾದಕ ಎಂದು ಗುರುತಿಸಿತ್ತು. ಹಾಗೂ ಆತ ಪಾಕ್ ನ ಗುಪ್ತಚರ ಸಂಸ್ಥೆ ಐಎಸ್ ಐ ಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.

Advertisement

Author Image

Advertisement