ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಾಕ್‌ನ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್ ದಾಳಿ : 26 ಸಾವು

06:52 PM Feb 07, 2024 IST | Bcsuddi
Advertisement

ಇಸ್ಲಾಮಾಬಾದ್:  ಪಾಕಿಸ್ತಾನದಲ್ಲಿ ನಾಳೆ ಸಂಸತ್ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ದಿನವಾದ ಇಂದು ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಕಚೇರಿಯಲ್ಲಿ ಮುಂಭಾಗದಲ್ಲಿ ಅವಳಿ ಬಾಂಬ್ ಸ್ಫೋಟಗೊಂಡಿದೆ.

Advertisement

ಘಟನೆಯಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಹಾಗೂ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು,ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ.

ಫೆ.8 ರಂದು ಪಾಕಿಸ್ತಾನದಲ್ಲಿ ಸಂಸತ್ ಚುನಾವಣೆ ನಡೆಯಲ್ಲಿದ್ದು ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸದರೂ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ಮಾಹಿತಿ ದೊರಕಿದೆ.

ಈ ದಾಳಿಯು ಅಫ್ಘಾನ್ ಗಡಿಯ ಸಮೀಪದಲ್ಲಿರುವ ಕಿಲ್ಲಾ ಸೈಫುಲ್ಲಾ ಎಂಬ ಪಟ್ಟಣದಲ್ಲಿ ಜಮಿಯತ್ ಉಲೇಮಾ ಇಸ್ಲಾಂ ನ ಕಚೇರಿಯ ಬಳಿ ಸ್ಫೋಟಗೊಂಡಿದೆ ಎಂದು ಪ್ರಾಂತ್ಯದ ಮಾಹಿತಿ ಸಚಿವರು ತಿಳಿಸಿದ್ದಾರೆ.

Advertisement
Next Article