ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಧೀರ್ ರಂಜನ್ ಚೌಧರಿ ರಾಜೀನಾಮೆ

05:33 PM Jun 21, 2024 IST | Bcsuddi
Advertisement

ಕೊಲ್ಕತ್ತಾ:ಪಶ್ಚಿಮ ಬಂಗಾಳ ರಾಜ್ಯ ಕಾಂಗ್ರೆಸ್‌ನಲ್ಲಿ ಅಧೀರ್ ರಂಜನ್ ಚೌಧರಿ ಅಧಿಕಾರಾವಧಿ ಮುಗಿದಿದೆ. ಮೂಲಗಳ ಪ್ರಕಾರ, ಅಧೀರ್ ರಂಜನ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಾರಿ ಅಧೀರ್ ರಂಜನ್ ಲೋಕಸಭೆ ಚುನಾವಣೆಯಲ್ಲಿ ಬಹರಂಪುರದಲ್ಲಿ ಸೋಲನ್ನು ಅನುಭವಿಸಿದ್ದರು. ಅದರ ನಂತರ, ಅಧೀರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಧೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

ಮೂಲಗಳ ಪ್ರಕಾರ, ಅಧೀರ್ ರಂಜನ್ ಚೌಧರಿ ಅವರು ಕೆಲವು ದಿನಗಳ ಹಿಂದೆಯೇ ತಮ್ಮ ರಾಜೀನಾಮೆ ಪತ್ರವನ್ನು ಹೈಕಮಾಂಡ್‌ಗೆ ಕಳುಹಿಸಿದ್ದಾರೆ. ಹೈಕಮಾಂಡ್ ಆ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಅಧೀರ್ ರಾಜೀನಾಮೆ ನೀಡಿದ್ದೇಕೆ? ಅಧೀರ್ ಸೋತ ನಂತರ ಕಾಂಗ್ರೆಸ್ ಈ ರಾಜೀನಾಮೆ ಪತ್ರವನ್ನು ಕೇಳಿ ಪಡೆಯಿತಾ? ಬಂಗಾಳದಲ್ಲಿ ತನ್ನಿಂದಾಗಿಯೇ ಕುಸಿದು ಬಿದ್ದಿರುವ ಕಾಂಗ್ರೆಸ್ ಮುಂದೆ ಸಾಗಲು ಸಾಧ್ಯವಿಲ್ಲ ಎಂಬುದು ಅಧೀರನಿಗೆ ಅರಿವಾಗಿದೆಯೇ? ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ ಅಥವಾ ಅಧೀರ್ ರಂಜನ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇಂದು ಕೊಲ್ಕತ್ತಾದಲ್ಲಿ ಕಾಂಗ್ರೆಸ್‌ನ ಪ್ರಾಂತೀಯ ಸಭೆ ನಡೆಯಿತು. ಈ ಸಭೆಯ ನಂತರ, ಅಧೀರ್ ರಂಜನ್ ಮಾತನಾಡಿ, ನಾನು ಬಂಗಾಳದ ಪ್ರದೇಶ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ. ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದ ದಿನದಿಂದಲೂ ದೇಶದಲ್ಲಿ ಎಲ್ಲೂ ರಾಜ್ಯಾಧ್ಯಕ್ಷರೇ ಇರಲಿಲ್ಲ. ಎಲ್ಲರೂ ಹಂಗಾಮಿ ಅಧ್ಯಕ್ಷರಷ್ಟೇ. ನಾನು ಕೂಡ ಹಂಗಾಮಿ ಅಧ್ಯಕ್ಷ ಮಾತ್ರ. ಹೊಸ ನೇಮಕಾತಿ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಹೇಳಿದ್ದರು.

 

Advertisement
Next Article