For the best experience, open
https://m.bcsuddi.com
on your mobile browser.
Advertisement

ಪವಾರ್ 'ಹಗರಣಗಳ ಸರದಾರ,' ಉದ್ಧವ್ ಠಾಕ್ರೆ 'ಔರಂಗಜೇಬ ಅಭಿಮಾನಿಗಳ ಸಂಘದ ಲೀಡರ್' : ಶಾ ಕಿಡಿ

01:48 PM Jul 22, 2024 IST | Bcsuddi
ಪವಾರ್  ಹಗರಣಗಳ ಸರದಾರ   ಉದ್ಧವ್ ಠಾಕ್ರೆ  ಔರಂಗಜೇಬ ಅಭಿಮಾನಿಗಳ ಸಂಘದ ಲೀಡರ್    ಶಾ ಕಿಡಿ
Advertisement

ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉದ್ಧವ್ ಠಾಕ್ರೆ 'ಔರಂಗಜೇಬ್ ಅಭಿಮಾನಿಗಳ ಸಂಘದ ನಾಯಕ' ಎಂದು ಕರೆದಿದ್ದಾರೆ. ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿ, ಮಾತನಾಡಿದರು.

ಶರದ್‌ ಹಗರಣಗಳ ಸರದಾರ, ದೇಶದಲ್ಲಿ ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದ ಯಾರಾದರೂ ನಾಯಕರಿದ್ದರೆ, ಅದು ಪವಾರ್...‘ಈ ಹಿಂದೆ ಬಿಜೆಪಿ ಜೊತೆಗೆ ಮೈತ್ರಿಯನ್ನು ಹೊಂದಿದ್ದ ಉದ್ಧವ್‌ ಠಾಕ್ರೆ ಅವರನ್ನೂ ಗುರಿಯಾಗಿಸಿದ ಶಾ, ‘ಇಲ್ಲಿ, ಔರಂಗಜೇಬ್‌ ಅಭಿಮಾನಿಗಳ ಸಂಘವಿದೆ. ಅದು, ಭಾರತಕ್ಕೆ ರಕ್ಷಣೆಯ ಭರವಸೆ ನೀಡುವುದಿಲ್ಲ. ಅದರ ಬಗ್ಗೆ ನಿಮಗೆ ಗೊತ್ತಿದೆಯಾ? ಉದ್ಧವ್‌ ಠಾಕ್ರೆ ಆ ಅಭಿಮಾನಿಗಳ ಸಂಘದ ನಾಯಕರು’ ಎಂದು ಟೀಕಿಸಿದರು.

‘ಮೊಹಮ್ಮದ್‌ ಅಜ್ಮಲ್‌ ಕಸಬ್ (ಮುಂಬೈ ಉಗ್ರರ ದಾಳಿ ಕೃತ್ಯದ ಆರೋಪಿ) ಜೊತೆಗೆ ಗುರುತಿಸಿಕೊಂಡಿದ್ದವರ ಜೊತೆಗೂಡಿ ಉದ್ಧವ್‌ ಊಟ ಮಾಡುತ್ತಾರೆ. ವಿವಾದಿತ ಇಸ್ಲಾಮಿಕ್‌ ಬೋಧಕ ಝಾಕೀರ್ ನಾಯ್ಕಗೆ ಶಾಂತಿಧೂತ ಪ್ರಶಸ್ತಿ ನೀಡಿದವರಿಗೆ ಅವರು ಬೆಂಬಲಿಸುತ್ತಾರೆ. ಪಿಎಫ್‌ಐ ಬೆಂಬಲಿಸಿದವರಿಗೂ ಬೆಂಬಲಿಸುತ್ತಾರೆ. ಅಭಿಮಾನಿಗಳ ಸಂಘವು ಮಹಾರಾಷ್ಟ್ರ ಅಥವಾ ಭಾರತ ಸುರಕ್ಷಿತವಾಗಿ ಇರಲು ಅವಕಾಶ ನೀಡುವುದಿಲ್ಲ. ಅಂತಹ ಭದ್ರತೆ ನೀಡಲು ಶಕ್ತವಾಗಿರುವುದು ಬಿಜೆಪಿ ಮಾತ್ರ’ ಎಂದು ಹೇಳಿದರು. ‘ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷದ ಪರಾಭವದ ಬಳಿಕ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಅಹಂಕಾರವೂ ಪತನವಾಗಲಿದೆ’ ಎಂದು ಹರಿಹಾಯ್ದದರು..

Advertisement

Author Image

Advertisement