ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪನೀರ್ ಪಕೋಡ ತಯಾರಿಸುವುದು ಹೇಗೆ

09:10 AM Oct 10, 2024 IST | BC Suddi
Advertisement

ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಪನೀರ್ ಪಕೋಡ ರೆಸಿಪಿ ಹೇಗೆ ಮಾಡುವುದು ಎಂಬುದನ್ನು ನೋಡೋಣ ಬೇಕಾಗುವ ಸಾಮಗ್ರಿಗಳು:ಪನೀರ್ ಕ್ಯೂಬ್ಸ್ – 500 ಗ್ರಾಂಕಡ್ಲೆ ಹಿಟ್ಟು – 1 ಕಪ್ಅಚ್ಚಖಾರದ ಪುಡಿ – 1 ಚಮಚಅರಶಿಣ – 1 ಚಮಚಉಪ್ಪು – ರುಚಿಗೆ ತಕ್ಕಷ್ಟುಜೀರಿಗೆ ಪುಡಿ – ಅರ್ಧ ಚಮಚಅಡುಗೆ ಸೋಡಾ – 1 ಚಮಚಎಣ್ಣೆ – ಅಗತ್ಯಕ್ಕೆ ತಕ್ಕಷ್ಟುಚಾಟ್ ಮಸಾಲ – ಸ್ವಲ್ಪ ಮಾಡುವ ವಿಧಾನ:

Advertisement

ಮೊದಲಿಗೆ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟನ್ನು ಹಾಕಿಕೊಂಡು ಅದಕ್ಕೆ ನೀರು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಅರಶಿಣ ಮತ್ತು ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪವಾ ಮಿಶ್ರಣ ಮಾಡಬೇಕು. ಈ ಮಿಶ್ರಣದಲ್ಲಿ ಪನೀರ್ ಕ್ಯೂಬ್ಸ್ ಅನ್ನು ಚನ್ನಾಗಿ ಅದ್ದಿ ಮಿಶ್ರಣದೊಂದಿಗೆ ಹೊಂದಿಕೊಳ್ಳುವಂತೆ ಕೋಟಿಂಗ್ ಮಾಡಿ. ಬಳಿಕ ಒಂದು ಬಾಣಾಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಗಿಟ್ಟು, ಕಾದ ಬಳಿಕ ಅದಕ್ಕೆ ಕಡ್ಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಪನೀರ್ ಕ್ಯೂಬ್ಸ್ ಅನ್ನು ಹಾಕಿಕೊಂಡು ಫ್ರೈ ಮಾಡಿ, ಅದೇ ರೀತಿ ಎಲ್ಲಾ ಪನೀರ್ ಕ್ಯೂಬ್ಸ್‌ಗಳನ್ನು ಕಾಯಿಸಿಕೊಳ್ಳಿ. ನಂತರ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಪುಡಿಯನ್ನು ಹಾಕಿಕೊಂಡು ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬಿಸಿಬಿಸಿ ತಿನ್ನಲು ಕೊಡಿ

Advertisement
Next Article