For the best experience, open
https://m.bcsuddi.com
on your mobile browser.
Advertisement

ಪತಿ ಪತ್ನಿಯರ ಅನಧಿಕೃತವಾಗಿ ಹಣಕ್ಕಾಗಿ ಕಾಲ್ ಡೀಟೇಲ್ಸ್ ನೀಡ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್‌ ಅರೆಸ್ಟ್..!

09:31 AM Aug 08, 2024 IST | BC Suddi
ಪತಿ ಪತ್ನಿಯರ ಅನಧಿಕೃತವಾಗಿ ಹಣಕ್ಕಾಗಿ ಕಾಲ್ ಡೀಟೇಲ್ಸ್ ನೀಡ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್‌ ಅರೆಸ್ಟ್
Advertisement

ಬೆಂಗಳೂರು: ಸಿಸಿಬಿ ಹಾಗೂ ವಿಜಯನಗರ ಉಪವಿಭಾಗದ ಪೊಲೀಸರು ಕಾರ್ಯಾಚರಣೆಯಲ್ಲಿ ಬಯಲಾಗಿದ್ದ ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳ ಕಳ್ಳಾಟದಲ್ಲಿ ಸಿಸಿಬಿ ಪೊಲೀಸರು ಸಿಐಡಿ ಪೊಲೀಸ್ ಸಿಬ್ಬಂದಿಯನ್ನ ಬಂಧಿಸಿದ್ದಾರೆ. ಕಳೆದ ಮೇ‌ ತಿಂಗಳಲ್ಲಿ ಮಹಾನಗರಿ ಡಿಟೆಕ್ಟಿವ್ & ಸೆಕ್ಯುರಿಟಿ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ ಅನಧಿಕೃತವಾಗಿ ಸಿಡಿಆರ್ ಪಡೆಯುತ್ತಿದ್ದ ಆರೋಪ ಹಿನ್ನೆಲೆ ಮೂರು ಪ್ರಕರಣಗಳನ್ನು ದಾಖಲಿಸಿದ್ದರು.

ಆಸಮಯದಲ್ಲಿ ಪುರುಷೋತ್ತಮ, ಸತೀಶ್ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಎಂಬುವರನ್ನು ಬಂಧಿಸಲಾಗಿತ್ತು. ಸದ್ಯ ಈ ತಂಡದ ಕಿಂಗ್ ಪಿನ್ ಆಂಧ್ರದ ನಾಗೇಶ್ವರ ರೆಡ್ಡಿಗೆ ಎಂಬಾತನನ್ನ ಬಂಧಿಸಲಾಗಿದೆ. ಇನ್ನು ಈ ನಾಗೇಶ್ವರ ರೆಡ್ಡಿಗೆ ಸಿಡಿ ಆರ್ ನೀಡುತ್ತಿದ್ದ ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಎಂಬಾತನನ್ನ ಬಂಧಿಸಲಾಗಿದೆ.

ಮುನಿರತ್ನ ಹಲವು ವರ್ಷಗಳಿಂದ ಸಿಐಡಿ ಟೆಕ್ನಿಕಲ್ ಸೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಹಿರಿಯ ಅಧಿಕಾರಿಗಳು ಕೇಸ್ ಸಂಬಂಧ ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪ್ರವೈಡ್‌ಗಳಿಗೆ ನೀಡುವ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್‌ಗಳನ್ನ ಸೇರಿಸಿ ಸಿಡಿಆರ್ ಪಡೆಯುತ್ತಿದ್ದ. ಸಿಡಿಆರ್ ಬಂದ ನಂತರ ಅಧಿಕೃತವಾದ ಸಿಡಿಆರ್‌ಗಳನ್ನ ಅಧಿಕಾರಿಗಳಿಗೆ ನೀಡಿ ಅನಧಿಕೃತ ಸಿಡಿಆರ್‌ಗಳನ್ನ ನಾಗೇಶ್ವರ ರೆಡ್ಡಿಗೆ ನೀಡ್ತಿದ್ದ. ಗಂಡ ಹೆಂಡತಿ, ಪ್ರೇಮಿಗಳ ನಡುವಿನ ಅನುಮಾಕ್ಕೆ ಹೆಚ್ಚು ಸಿಡಿಆರ್ ಗಳ ಬಳಕೆ. ಇನ್ನು ಈ ಸಿಡಿಆರ್ ಪಡೆಯುತ್ತಿದ್ದವರು ಯಾರು ಅಂತ ನೋಡೊದಾದ್ರೆ ಹೆಚ್ಚಾಗಿ ಗಂಡ ಅಥವಾ ಹೆಂಡತಿ‌ ಮತ್ತು ಪ್ರೇಮಿಗಳು ಸಂಬಂಧದಲ್ಲಿ ಅನುಮಾನ ಮೂಡಿ ತಮ್ಮ ಪ್ರೀತಿ ಪಾತ್ರರ ಯಾರ ಸಂಪರ್ಕದಲ್ಲಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಈ ಕಾಲ್ ಡಿಟೈಲ್‌ ನ ಅನಧಿಕೃತವಾಗಿ ಪಡೆದುಕೊಳ್ಳುತ್ತಿದ್ರು ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ ಬ್ಯುಸಿನೆಸ್ ಮೆನ್ ಗಳ ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ಎದುರಾಳಿಗಳ ಸಿಡಿಆರ್ ಪಡೆದಿರೋ ಶಂಕೆ ವ್ಯಕ್ತವಾಗಿದೆ. ಇದ್ರಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ಪತ್ನಿಯರು ತಮ್ಮ ಪತಿಯಕಾಲ್ ಡೀಟೇಲ್ಸ್ ಪಡೆದಿದ್ದಾರಂತೆ. ಸದ್ಯ ನಾಗೇಶ್ವರ ರೆಡ್ಡಿ ಮತ್ತು ಪೊಲೀಸ್ ಸಿಬ್ಬಂದಿ ಮುನಿರತ್ನ ಬಂಧಿಸಿರೋ ಸಿಸಿಬಿ ಹಚ್ಚಿನ ವಿಚಾರಣಗೆ ಒಳಪಡಿಸಿದೆ.

Advertisement

Author Image

Advertisement