For the best experience, open
https://m.bcsuddi.com
on your mobile browser.
Advertisement

ಪತಿ ಜೊತೆ ಮಗು ಮಾತನಾಡುವುದು ಇಷ್ಟವಿರಲಿಲ್ಲ, ಪ್ರಜ್ಞೆ ತಪ್ಪಿಸಲು ಯತ್ನಿಸಿದೆ: ಸುಚನಾ ಸೇಠ್

10:08 AM Jan 10, 2024 IST | Bcsuddi
ಪತಿ ಜೊತೆ ಮಗು ಮಾತನಾಡುವುದು ಇಷ್ಟವಿರಲಿಲ್ಲ  ಪ್ರಜ್ಞೆ ತಪ್ಪಿಸಲು ಯತ್ನಿಸಿದೆ  ಸುಚನಾ ಸೇಠ್
Advertisement

ಪಣಜಿ:  ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿ, ಶವವನ್ನು ಬ್ಯಾಗ್ ನಲ್ಲಿಟ್ಟುಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಬಂಧನಕ್ಕೊಳಗಾದ ಮೈಂಡ್ ಫುಲ್ ಎಐ ಲ್ಯಾಬ್ ಎಂಬ ಸ್ಟಾಟರ್ಪ್ ನ ಸಿಇಓ ಸುಚನಾ ಸೇಠ್ ಗೆ ನ್ಯಾಯಾಲಯ ೬ ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಸುಚನಾ ಸೇಠ್ ಹಾಗೂ ವೆಂಕಟರಾಮನ್ ವಿಚ್ಛೇದನ ಕೋರ್ಟ್ ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನ ವಿಡೀಯೋ ಕಾಲ್ ಮೂಲಕ ತೋರಿಸಬೇಕಿತ್ತು. ಆದರೆ ಇದು ಆಕೆಗೆ ಇಷ್ಟವಿರದೇ ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.

ಬಂಧಿತ ಸುಚನಾ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮ್ಹಾಪ್ಸಾ ನ್ಯಾಯಾಲಕ್ಕೆ ಹಾಜರುಪಡಿಸಲಾಗಿತ್ತು .ಈ ವೇಳೇಸುಚನಾ ತನಗೆ ಕಡಿಮೆ ಶಿಕ್ಷೆ ನೀಡಬೇಕು ಎಂದು ನ್ಯಾಯಾಧೀಶರ ಬಳಿ ಬೇಡಿಕೊಂಡಿದ್ದು, ಪೊಲೀಸರು ವಕೀಲರ ಬಳಿ ಮಾತನಾಡಲು ಬಿಡದೇ ನೇರವಾಗಿ ಇಲ್ಲಿಗೆ ಕರೆತಂದಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಗಂಡನಿಗೆ ಮಗುವನ್ನು ತೋರಿಸುವುದಕ್ಕೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು ಎಂದಿದ್ದಾಳೆ.ಇದೇ ನೋವಿನಲ್ಲಿ ಕೈ ಕುಯ್ದ ಆತ್ಮಹತ್ಯೆಗೆ ಯತ್ನಿಸಿದೆ, ಆದರೆ ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನು ಮಾಡಬೇಕೆಂದು ತೋಚದೆ ಸೂಟ್ ಕೇಸ್ ನಲ್ಲಿ ಮಗುವಿನ ಬಾಡಿ ಹಾಕಿ ಪರಾರಿಯಾಗಲು ಯತ್ನಿಸಿದೆ ಎಂದು ವಿವರಿಸಿದ್ದಾಳೆ.

ಇನ್ನು ಮಗುವಿನ ತಂದೆವೆಂಕಟರಾಮನ್ ಮಂಗಳವಾರ ಇಂಡೋನೇಷ್ಯಾದಿಂದ ಆಗಮಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಗುವುದುಎಂದು ವೈದ್ಯರು ಹಾಗೂ ಪೊಲೀಸರು ತಿಳಿಸಿದ್ದಾರೆ.

Author Image

Advertisement