ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನೋಟರಿ ವಕೀಲರಿಗೆ ಕೇಂದ್ರ ಸರ್ಕಾರದ ಮಹತ್ವದ ಸೂಚನೆ- ಈ ದಾಖಲೆಗೆ ಸಹಿ ಹಾಕಿದರೆ ಕ್ರಮ ಗ್ಯಾರಂಟಿ!

09:27 AM Oct 15, 2024 IST | BC Suddi
Advertisement

ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ನೋಟರಿ ವಕೀಲರಿಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಮಹತ್ವದ ಸೂಚನೆ ಹೊರಡಿಸಿದೆ.

Advertisement

ದಿನಾಂಕ 10-10-2024ರಂದು ಕಾನೂನು ವ್ಯವಹಾರಗಳ ವಿಭಾಗ ಎಲ್ಲ ನೋಟರಿ ವಕೀಲರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಇದರಲ್ಲಿ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಲಾಗಿದೆ.

ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿಟ್‌ಗೆ ಅಟೆಸ್ಟ್ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನೋಟರಿ ಕಾಯ್ದೆ 1952 ಸೆಕ್ಷನ್ 8 ಮತ್ತು ನೋಟರಿ ನಿಯಮಗಳು-1956ರ ನಿಯಮ 11ರ ಪ್ರಕಾರ ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನ ಮಾಡುವುದು ನೋಟರಿ ವಕೀಲರ ಕೆಲಸದ ಭಾಗವಲ್ಲ.

ಈ ನಿಯಮ ಮತ್ತು ಕಾಯ್ದೆಗಳ ಪ್ರಕಾರ, ನೋಟರಿ ವಕೀಲರು ಯಾವುದೇ ವಿವಾಹವನ್ನು ಅಧಿಕೃತಗೊಳಿಸಿ ಪ್ರಮಾಣಪತ್ರ ನೀಡುವಂತಿಲ್ಲ. ಅದೇ ರೀತಿ, ವಿಚ್ಚೇದನ ಪತ್ರದ ನೋಂದಣಿಯನ್ನು ನೋಂದಾಯಿಸುವಂತಿಲ್ಲ.

ನೋಟರಿ ವಕೀಲರು ವಿವಾಹ ಅಧಿಕಾರಿಯಾಗಿ ನೇಮಕಗೊಂಡಿಲ್ಲ. ವೈವಾಹಿಕ ನೋಂದಣಿಗಳ ಪ್ರದತ್ತ ಅಧಿಕಾರವನ್ನು ನೋಟರಿ ವಕೀಲರಿಗೆ ನೀಡಲಾಗಿಲ್ಲ ಎಂದು ಇಲಾಖೆಯಿಂದ ಹೊರಡಿಸಲಾದ ಕಚೇರಿ ಜ್ಞಾಪನಾ ಪತ್ರದ ನೋಟೀಸ್‌ನಲ್ಲಿ ತಿಳಿಸಲಾಗಿದೆ.

ಯಾರಾದರೂ ನೋಟರಿ ವಕೀಲರ ನೆಲೆಯಲ್ಲಿ ವೈವಾಹಿಕ ದಾಖಲೆಗಳನ್ನು ವಿವಾಹ ನೋಂದಣಿ ಅಥವಾ ವಿಚ್ಚೇದನ ಕರಾರನ್ನು ದೃಢಪಡಿಸಿದ್ದಲ್ಲಿ ಅಥವಾ ನೋಂದಣಿ ಮಾಡಿಸಿಕೊಂಡಲ್ಲಿ ಅದನ್ನು ಗಂಭೀರ ದುರ್ವರ್ತನೆ ಎಂದು ಪರಿಗಣಿಸಲಾಗುವುದು ಮತ್ತು ಅಂತಹ ವಕೀಲರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇದಕ್ಕೆ ಸಂಬಂಧಪಟ್ಟಂತೆ ಮೂರು ಮಹತ್ವದ ತೀರ್ಪುಗಳನ್ನು ನೋಟೀಸ್ ಉಲ್ಲೇಖಿಸಿದೆ.

1) Partha Sarathi Das Vs State of Orissa 2023 SCC Online Ori 5657 Dated 14-09-2023 High Court of Orissa

2) Mukesh Vs The State of M.P. M Cr L 44184/2020 Dated 31-12-2020 High Court of M.P.

3) Bundel Singh Lodhi Vs State of M.P. M Cr L 15168/2021 Dated 30-04-2021 High Court of M.P.

Advertisement
Next Article