ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನೇಪಾಳದಲ್ಲಿ ಭೀಕರ ಮಳೆಗೆ ಜನ ತತ್ತರ - 112 ಮೃತ್ಯು, 79 ಜನ ನಾಪತ್ತೆ

12:48 PM Sep 29, 2024 IST | BC Suddi
Advertisement

ಕಠ್ಮಂಡು :ನಿರಂತರ ಮಳೆಯಿಂದ ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಪರಿಣಾಮ ನೇಪಾಳದಲ್ಲಿ 112 ಜನರು ಮೃತಪಟ್ಟಿದ್ದಾರೆ. ಹಾಗೂ 79 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

Advertisement

ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಜನರನ್ನು ರಕ್ಷಣಾಪಡೆಗಳು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ.

ಶನಿವಾರ ಹೆಲಿಕಾಪ್ಟರ್‌ಗಳು ಮತ್ತು ಮೋಟಾರ್‌ಬೋಟ್‌ಗಳೊಂದಿಗೆ 3,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಗಳನ್ನು ಮಾಡಿ ಅನೇಕರನ್ನು ರಕ್ಷಿಸಿದ್ದಾರೆ.

“ಕಾಣೆಯಾದ ಜನರನ್ನು ರಕ್ಷಿಸಲು ಮತ್ತು ಹುಡುಕಲು ಪೊಲೀಸರು ಇತರ ಏಜೆನ್ಸಿಗಳು ಮತ್ತು ಸ್ಥಳೀಯರೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ.” ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಬಸಂತ ಅವರು ತಿಳಿಸಿದರು.

 

Advertisement
Next Article