For the best experience, open
https://m.bcsuddi.com
on your mobile browser.
Advertisement

ನೇಪಾಳದಲ್ಲಿ ಪ್ರಬಲ ಭೂಕಂಪಕ್ಕೆ ಮಲಗಿದ್ದಲ್ಲೆ ಕಟ್ಟಡದಡಿ ಸಿಲುಕಿ ಉಸಿರು ಚೆಲ್ಲಿದ ಉಪಮೇಯರ್

10:29 AM Nov 04, 2023 IST | Bcsuddi
ನೇಪಾಳದಲ್ಲಿ ಪ್ರಬಲ ಭೂಕಂಪಕ್ಕೆ ಮಲಗಿದ್ದಲ್ಲೆ ಕಟ್ಟಡದಡಿ ಸಿಲುಕಿ ಉಸಿರು ಚೆಲ್ಲಿದ ಉಪಮೇಯರ್
Advertisement

ಕಠ್ಮಂಡು : ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 128ಕ್ಕೂ ಅಧಿಕ ಮಂದಿ ಸಾವನಪ್ಪಿದ್ದು, ಹಲವು ಇನ್ನೂ ಕಟ್ಟಡದ ಅವಶೇಷಗಳಲ್ಲಿ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು 10 ಕಿ.ಮೀ ಆಳದಲ್ಲಿದೆ ಎಂದು ‌ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ನೇಪಾಳದ ರುಕುಮ್ ವೆಸ್ಟ್‌ನಲ್ಲಿ ಕನಿಷ್ಠ 36 ಜನರು ಹಾಗೂ ಜಾಜರ್‌ಕೋಟ್‌ನಲ್ಲಿ 34 ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ’ ಎಂದು ರುಕುಮ್ ವೆಸ್ಟ್‌ನ ಜಿಲ್ಲಾಧಿಕಾರಿ ಹರಿ ಪ್ರಸಾದ್ ಪಂತ್ ತಿಳಿಸಿದ್ದಾರೆ.

Advertisement

ಜಾಜರ್ ಕೋಟ್‍ನ ನಲ್ಗಢ್ ಪುರಸಭೆಯ ಉಪಮೇಯರ್ ಸರಿತಾ ಸಿಂಗ್ ಅವರು ಸಾವನ್ನಪ್ಪಿದ್ದಾರೆ. ಉಪಮೇಯರ್ ಸಿಂಗ್ ಅವರು ಪಾಲಿಕೆಯ ಪ್ರಧಾನ ಕಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿದ್ದರು. ಈ ವೇಳೆ ಭೂಕಂಪನದಿಂದ ಕಟ್ಟಡದಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಕರ್ನಾಲಿ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಡಿಐಜಿ ಭೀಮ್ ಧಾಕಲ್ ಮಾಹಿತಿ ನೀಡಿದ್ದಾರೆ.

Author Image

Advertisement