For the best experience, open
https://m.bcsuddi.com
on your mobile browser.
Advertisement

ನೆಲಮಾಳಿಗೆಯ ಕೋಚಿಂಗ್ ಸೆಂಟರ್ಗೆ ಮಳೆಯ ನೀರು ನುಗ್ಗಿ ಮೂವರು ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಮೂವರು ಅಭ್ಯರ್ಥಿಗಳು ಮೃತ.!

07:46 AM Jul 28, 2024 IST | Bcsuddi
ನೆಲಮಾಳಿಗೆಯ ಕೋಚಿಂಗ್ ಸೆಂಟರ್ಗೆ ಮಳೆಯ ನೀರು ನುಗ್ಗಿ ಮೂವರು ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಮೂವರು ಅಭ್ಯರ್ಥಿಗಳು ಮೃತ
Advertisement

ನವದೆಹಲಿ: ನೆಲಮಾಳಿಗೆಯ ಕೋಚಿಂಗ್ ಸೆಂಟರ್ಗೆ ಮಳೆಯ ನೀರು ತುಂಬಿಕೊಂಡು ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಮೂವರು ಅಭ್ಯರ್ಥಿಗಳು ಮೃತಪಟ್ಟಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಕೇಂದ್ರ ದೆಹಲಿಯ ಹಳೆಯ ರಾಜಿಂದರ್ ನಗರ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ದೆಹಲಿ ಅಗ್ನಿಶಾಮಕ ಇಲಾಖೆಯ(ಡಿಎಫ್ಎಸ್) ಪ್ರಕಾರ, ಭಾರಿ ಮಳೆ ಹಿನ್ನೆಲೆಯಲ್ಲಿ ‘ರಾಜೂಸ್ ಐಎಎಸ್ ಸ್ಟಡಿ ಸರ್ಕಲ್’ನ ನೆಲಮಾಳಿಗೆಯು ಮಳೆ ನೀರಿನಿಂದ ಆವೃತ್ತವಾಗಿರುವ ಬಗ್ಗೆ ರಾತ್ರಿ 7 ಗಂಟೆ ಸುಮಾರಿಗೆ ಕರೆ ಬಂದಿತು. ಕೆಲ ವ್ಯಕ್ತಿಗಳು ನೆಲಮಾಳಿಗೆಯಲ್ಲಿ ಸಿಲುಕಿರುವ ಬಗ್ಗೆ ಕರೆ ಮಾಡಿದಾತ ಅನುಮಾನ ವ್ಯಕ್ತಪಡಿಸಿದ್ದರು. ಸಂಪೂರ್ಣ ನೆಲಮಾಳಿಗೆ ಮಳೆನೀರಿನಿಂದ ಆವೃತ್ತವಾಗಿದ್ದೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅದು ತಿಳಿಸಿದೆ.

5 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ನೆಲಮಾಳಿಗೆ ಸಂಪೂರ್ಣ ಜಲಾವೃತಗೊಂಡಿತ್ತು ಎಂದು ಅಗ್ನಿಶಾಮಕ ಕೇಂದ್ರತಿಳಿಸಿದೆ.

Advertisement

Tags :
Author Image

Advertisement