For the best experience, open
https://m.bcsuddi.com
on your mobile browser.
Advertisement

ನುಗ್ಗೆ ಸೊಪ್ಪಿನ ಅದ್ಭುತ ಆರೋಗ್ಯ ಪ್ರಯೋಜನಗಳು..!

09:37 AM Feb 09, 2024 IST | Bcsuddi
ನುಗ್ಗೆ ಸೊಪ್ಪಿನ ಅದ್ಭುತ ಆರೋಗ್ಯ ಪ್ರಯೋಜನಗಳು
Advertisement

ನುಗ್ಗೇಕಾಯಿ ಪೋಷಕಾಂಶಗಳ ಕಣಜ. ಇದರ ಸೊಪ್ಪಿನಲ್ಲಿಯೂ ಹೇರಳವಾದ ಔಷಧೀಯ ಗುಣಗಳಿವೆ. ನುಗ್ಗೆ ಸೊಪ್ಪು ಅನೇಕ ರೋಗಗಳಿಗೆ ರಾಮಬಾಣ. ನಿಯಮಿತವಾಗಿ ನುಗ್ಗೆ ಸೊಪ್ಪು ಸೇವಿಸುವುದರಿಂದ ನೀವು ಅನೇಕ ರೋಗಗಳಿಂದ ಮುಕ್ತಿ ಹೊಂದಬಹುದು.

ನುಗ್ಗೆ ಸೊಪ್ಪನ್ನು ಸಾರು, ಪಲ್ಯ ರೂಪದಲ್ಲಿ ಸೇವಿಸಬಹುದು. ಇದು ಹಸಿಯಿದ್ದಾಗ ಸ್ವಲ್ಪ ಕಹಿ ಎನಿಸಿದ್ರೂ ಬೇಯಿಸಿದಾಗ ವಿಶಿಷ್ಟ ರುಚಿ ನೀಡುವ ಈ ಸೊಪ್ಪು ಅನೇಕ ರೋಗಗಳಿಗೆ ರಾಮಬಾಣವಾಗಿದೆ.

ನುಗ್ಗೆ ಸೊಪ್ಪಿಗೆ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಇದಕ್ಕೆ ಉಪ್ಪು ಹಾಗೂ ಕರಿಮೆಣಸಿನ ಪುಡಿ ಬೆರೆಸಿ ಮಿಶ್ರಣ ತಯಾರಿಸಿ ಕುಡಿಯಿರಿ. ಇದರಲ್ಲಿ ಐರನ್, ವಿಟಮಿನ್ಸ್ ಹಾಗೂ ಮಿನರಲ್ ಗಳು ಹೇರಳವಾಗಿವೆ. ಕ್ಯಾರೆಟ್‍ನ ಹತ್ತು ಪಟ್ಟು ಹೆಚ್ಚು ವಿಟಮಿನ್ ‘ಎ’ ಇದರಲ್ಲಿದೆ ಎನ್ನಲಾಗಿದೆ.

Advertisement

ನುಗ್ಗೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಚಟ್ನಿ ಪುಡಿ ರೂಪದಲ್ಲೂ ಸೇವಿಸಬಹುದು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಆರೋಗ್ಯ ತುಂಬಾ ಸಹಕಾರಿಯಾಗಿದೆ.

ನುಗ್ಗೆಸೊಪ್ಪಿನ ಕಷಾಯವನ್ನು ನಿತ್ಯ ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಅಧಿಕ ರಕ್ತದೊತ್ತಡ ಸೇರಿದಂತೆ ದೇಹದ ಹಲವಾರು ರೋಗಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ.

ನುಗ್ಗೆಸೊಪ್ಪು ಶ್ವಾಸಕೋಶ ಮತ್ತು ಯಕೃತ್ ಸಮಸ್ಯೆ ನಿವಾರಣೆಗೆ ಸಹಕಾರಿ. ಥೈರಾಯ್ಡ್ ಸಮಸ್ಯೆಯನ್ನೂ ಇದು ನಿಯಂತ್ರಿಸುತ್ತದೆ. ರಕ್ತಹೀನತೆ ಸಮಸ್ಯೆ ಬರದಂತೆಯೂ ಇದು ನೋಡಿಕೊಳ್ಳುತ್ತದೆ.

Author Image

Advertisement