For the best experience, open
https://m.bcsuddi.com
on your mobile browser.
Advertisement

ನೀರಿಗೆ ಬೇವಿನಎಣ್ಣೆ ಬೆರೆಸಿ ಸ್ನಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ..?

09:07 AM Sep 29, 2024 IST | BC Suddi
ನೀರಿಗೆ ಬೇವಿನಎಣ್ಣೆ ಬೆರೆಸಿ ಸ್ನಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ
Advertisement

ಚಳಿಗಾಲದಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಕಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡುವುದು ಅಗತ್ಯ. ಹಾಗಾಗಿ ಚಳಿಗಾಲದಲ್ಲಿ ನೀವು ಸ್ನಾನ ಮಾಡುವಂತಹ ನೀರಿಗೆ ಕೆಲವು ಹನಿ ಬೇವಿನ ಎಣ್ಣೆ ಹಾಕಿ ಸ್ನಾನ ಮಾಡಿ. ಬೇವಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿ ಗುಣಗಳಿರುವುದರಿಂದ ಇದು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಚಳಿಗಾಲದಲ್ಲಿ ಚರ್ಮವು ತುಂಬಾ ಒಣಗುತ್ತಿದ್ದರೆ ನೀವು ಸ್ನಾನ ಮಾಡುವಂತಹ ನೀರಿಗೆ ಬೇವಿನ ಎಣ್ಣೆಯನ್ನು ಮಿಕ್ಸ್ ಮಾಡಿ ಸ್ನಾನ ಮಾಡಿ. ಇದರಿಂದ ಚರ್ಮ ಒಣಗುವುದಿಲ್ಲ ಮತ್ತು ಸುಕ್ಕುಗಳು ಮೂಡುವುದಿಲ್ಲ. ಹಾಗೇ ಚರ್ಮದಲ್ಲಿ ಕಲೆಗಳು ಮತ್ತು ಸುಕ್ಕುಗಳಿದ್ದರೆ ಈ ಎಣ್ಣೆಯನ್ನು ದೇಹಕ್ಕೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಬಹುದು. ಹಾಗೇ ಚಳಿಗಾಲದಲ್ಲಿ ನಿಮ್ಮ ಮುಖ ಮತ್ತು ದೇಹದಲ್ಲಿ ಅಲರ್ಜಿ, ದದ್ದುಗಳು, ತುರಿಕೆ ಸಮಸ್ಯೆ ಕಾಡುತ್ತಿದ್ದರೆ ನೀವು ಸ್ನಾನ ಮಾಡುವ ನೀರಿಗೆ ಬೇವಿನ ಎಲೆ ಅಥವಾ ಎಣ್ಣೆಯನ್ನು ಹಾಕಿ ಸ್ನಾನ ಮಾಡಿ. ಇಲ್ಲವಾದರೆ ಬೇವಿನ ಎಲೆಗಳ ಪೇಸ್ಟ್ ಅಥವಾ ಬೇವಿನ ಎಣ್ಣೆಯನ್ನು ಮುಖ ಮತ್ತು ದೇಹಕ್ಕೆ ಹಚ್ಚಿ ಸ್ನಾನ ಮಾಡಿ. ಇದರಿಂದ ಚರ್ಮದ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ.

Author Image

Advertisement