ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿರ್ಮಾಣ ಹಂತದ ಚರ್ಚ್ ನ ಸ್ಲ್ಯಾ ಬ್ ಕುಸಿತ- ಓರ್ವ ಸಾವು , 10ಮಂದಿಗೆ ಗಾಯ

04:21 PM Jan 08, 2024 IST | Bcsuddi
Advertisement

ಹೈದರ್‌ಬಾದ್‌:ನಿರ್ಮಾಣ ಹಂತದ ಚರ್ಚ್ ನ ಸ್ಲ್ಯಾ ಬ್ ಕುಸಿದು ಬಿದ್ದ ಪರಿಣಾಮ ಓರ್ವ ವಲಸೆ ಕಾರ್ಮಿಕ ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.

Advertisement

ಜಿಲ್ಲೆಯ ಕೋಹಿರ್‌ನಲ್ಲಿ ನಿರ್ಮಾಣಗೊಳ್ಳುತಿದ್ದ ಚರ್ಚ್ ನ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಗುಂಪು ಸ್ಲ್ಯಾ ಬ್ ಕೆಲಸ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು  ಬಿದ್ದು ಅವಘಡ ಸಂಭವಿಸಿದೆ.

ಈ ವೇಳೆ ಸ್ಲ್ಯಾಬ್ ಕಾರ್ಯ ನಡೆಸುತ್ತಿದ್ದ ಕೆಳ ಭಾಗದಲ್ಲಿ ಕೆಲ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಸ್ಲ್ಯಾಬ್ ಕುಸಿದು ಬೀಳುವ ವೇಳೆ ಕೆಳಗಡೆ ಇದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು ಈ ವೇಳೆ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅಲ್ಲದೆ ಸುಮಾರು ಹತ್ತು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ ಗಾಯಗೊಂಡರವರನ್ನು ಹತ್ತಿರದ ಆಸ್ಪತೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Advertisement
Next Article