ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿರೂಪಕಿ ದಿವ್ಯಾ ವಸಂತ ಜೊತೆಗಿನ ವ್ಯಕ್ತಿಯ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ..!

01:50 PM Sep 21, 2024 IST | BC Suddi
Advertisement

ಬೆಂಗಳೂರು : ‘ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು’ ಎಂದು ಹೇಳಿ ವೈರಲ್‌ ಆಗಿ ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪ ಹೊತ್ತಿದ್ದ ದಿವ್ಯಾ ವಸಂತ ಅವರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದ ವ್ಯಕ್ತಿಯೊಂದಿಗೆ ತರಹೇವಾರಿ ಸಂಬಂಧ ಕಲ್ಪಿಸಲಾಗಿತ್ತು. ಆದರೆ, ಈ ಬಗ್ಗೆ ದಿವ್ಯಾ ಸ್ಪಷ್ಟನೆ ನೀಡಲು ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಅವರು ನನ್ನನ್ನು ದತ್ತು ತೆಗೆದುಕೊಂಡ ವೆಂಕಟೇಶಪ್ಪ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾನೊಬ್ಬ ಪ್ರಮುಖವಾದ ವ್ಯಕ್ತಿಯನ್ನು ನಿಮಗೆ ಪರಿಚಯ ಮಾಡಿಕೊಡ್ತೀನಿ. ಒನ್ ಅಂಡ್ ಓನ್ಲಿ ನಮ್ಮ ವೆಂಕಟೇಶ್ ಅಪ್ಪ. ನಾನು ಮೀಡಿಯಾದಲ್ಲಿ ವೃತ್ತಿ ಜೀವನ ಆರಂಭ ಮಾಡಿದ್ದು, ವೆಂಕಟೇಶಪ್ಪ ಅವರ ಕಡೆಯಿಂದ. ಅವರು ಒಂದು ಚಾನೆಲ್‌ನಲ್ಲಿ ಮೆಟ್ರೋ ಚೀಫ್ ಆಗಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದಕ್ಕಾಗಿ ನನ್ನನ್ನು ದತ್ತು ತೆಗೆದುಕೊಂಡಿದ್ದಾರೆ. ನಾನು ಅವರ ದತ್ತು ಪತ್ರಿ.. ಈ ಬಗ್ಗೆ ನೀನು ಹೇಳಪ್ಪ.. ಎಂದು ನಗೆ ಬೀರುತ್ತಾಳೆ.

Advertisement

ಈ ವೇಳೆ ಮಾತನಾಡಿದ ವೆಂಕಟೇಶಪ್ಪ ನನಗೆ ದಿವ್ಯಾ ವಸಂತ ಪರಿಚಯ ಆಗಿದ್ದು ಟಿವಿ 1 ಚಾನೆಲ್‌ನಲ್ಲಿ ಮೆಟ್ರೋ ಚೀಫ್ ಆಗಿ ಕೆಲಸ ಮಾಡುತ್ತಿದ್ದಾಗ. ಆಗ ರಿಪೋರ್ಟರ್ ಆಗಿ ಬಂದ ದಿವ್ಯಾ ಉತ್ತಮವಾಗಿ ಕೆಲಸ ಕಲಿಯುತ್ತಿದ್ದಳು. ತುಂಬಾ ಎಫರ್ಟ್ ಹಾಕಿ ಕೆಲಸ ಮಾಡುತ್ತಿದ್ದಳು. ಅವಳ ಶ್ರಮವೇ ಈಗ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ. ನನಗೆ ಯಾರೂ ಹೆಣ್ಣು ಮಕ್ಕಳಿಲ್ಲ. ನಾನು ಇವಳನ್ನು ನನ್ನ ಮಗಳೆಂದೇ ಭಾವಿಸಿದ್ದೇನೆ. ಏನೇ ಬೆಳೆದರೂ ಅದಕ್ಕೆ ನಾನೂ ಸಪೋರ್ಟ್ ಮಾಡುತ್ತೇನೆ. ಮಕ್ಕಳು ಬೆಳೆಯಬೇಕು ಅಲ್ವಾ.? ನಾವು ಸತ್ತಮೇಲೆ ಯಾರಾದರೂ ನಮ್ಮ ಹೆಸರೇಳಲು ಇರಬೇಕು ಎನ್ನುವ ಭಾವನೆ ನನ್ನದು ಎಂದು ಹೇಳಿಕೊಂಡಿದ್ದಾರೆ. ಇದಾದ ನಂತರ ಮಾತನಾಡಿದ ನಿರೂಪಕಿ ದಿವ್ಯಾ ವಸಂತ ದಯವಿಟ್ಟು ಯಾರೂ ತಂದೆ ಮಕ್ಕಳ ಸಂಬಂಧಕ್ಕೆ ಸಂಬಂಧಕ್ಕೆ ಬೇರೆ ಅರ್ಥವನ್ನು ಕೊಲ್ಪಿಸಬೇಡಿ.

ನಿಮ್ಮೆಲ್ಲರಲ್ಲೂ ನಾನು ಮನವಿ ಮಾಡಿಕೊಳ್ಳುತ್ತೇನೆ. ಇಷ್ಟಲ್ಲದೇ ಎಲ್ಲಿ ಆ ಮುದಿ ಅಳಿಮಯ್ಯ ಎಂದು ಬಹುತೇಕರು ಕಾಮೆಂಟ್ ಮಾಡುತ್ತಿದ್ದೀರಿ. ನಿಮಗೆ ಮನಸ್ಸಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದೀರ. ಇದರಿಂದ ನಮಗೆ ತುಂಬಾ ನೋವಾಗುತ್ತಿದೆ. ಏನೂ ಇಲ್ಲದಿದ್ದರೂ, ಏನೋ ಸಂಬಂಧವಿದೆ ಎಂದು ತೋರಿಸುತ್ತಿದ್ದೀರಿ. ರಾಸಲೀಲೆ ಎಂಬಂತೆ ತೋರಿಸುತ್ತಿದ್ದೀರಿ. ಎಲ್ಲಿ ರಾಸಲೀಲೆ ಇದೆ ಎಂಬುದು ಆ ದೇವರು ಒಬ್ಬನಿಗೇ ಗೊತ್ತು. ತಂದೆ ಮಗಳ ಸಂಬಂಧಕ್ಕೆ ಬೇರೊಂದು ಸಂಬಂಧ ಕಟ್ಟಿ ನಿಮ್ಮ ಮನಸ್ಸಿಗೆ ಬಂದಂತೆ ಮಾತನಾಡಬೇಡಿ ಎಂದು ಪೋಸ್ಟ್‌ನಲ್ಲಿ ಬರೆದು ಕೊಂಡಿದ್ದಾಳೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article