For the best experience, open
https://m.bcsuddi.com
on your mobile browser.
Advertisement

'ನಿರುದ್ಯೋಗವೇ ಸಂಸತ್‌ ಭದ್ರತಾ ವೈಫಲ್ಯಕ್ಕೆ ಕಾರಣ'- ರಾಹುಲ್‌ ಗಾಂಧಿ ಆರೋಪ

03:59 PM Dec 16, 2023 IST | Bcsuddi
 ನಿರುದ್ಯೋಗವೇ ಸಂಸತ್‌ ಭದ್ರತಾ ವೈಫಲ್ಯಕ್ಕೆ ಕಾರಣ   ರಾಹುಲ್‌ ಗಾಂಧಿ ಆರೋಪ
Advertisement

ಹೊಸದಿಲ್ಲಿ:ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯಿಂದಾಗಿ ಉಂಟಾಗಿರುವ ನಿರುದ್ಯೋಗ ಸಮಸ್ಯೆಯೇ ಸಂಸತ್‌ ಭದ್ರತಾ ವೈಫಲ್ಯದ ಘಟನೆಗೆ ಕಾರಣ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಆರೋಪಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೋದಿ ಅವರ ನೀತಿಯಿಂದಾಗಿ ದೇಶದ ನಾಗರಿಕರಿಗೆ ಉದ್ಯೋಗ ದೊರೆಯುತ್ತಿಲ್ಲ. ನಿರುದ್ಯೋಗದ ಕಾರಣದಿಂದಾಗಿಯೇ ಈ ಭದ್ರತಾ ವೈಫಲ್ಯ ಉಂಟಾಗಿದೆ ಎಂದು ಹೇಳಿದರು.

ಪ್ರಸ್ತುತ ದೇಶದ ನಾಗರಿಕರು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ನಿರುದ್ಯೋಗ, ಹಣದುಬ್ಬರ ಎಂದು ತಿಳಿಸಿದರು.

Advertisement

Author Image

Advertisement