ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿಮ್ಮ ನೀರಿನ ಟ್ಯಾಂಕ್ನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ಇದ್ದರೆ ಹೀಗೆ ಮಾಡಿ.!

08:15 AM Aug 02, 2024 IST | BC Suddi
Advertisement

 

Advertisement

ಬೆಂಗಳೂರು: ನೀರಿನ ಟ್ಯಾಂಕ್ ನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ವೇಗವಾಗಿ ಬೆಳೆಯುತ್ತವೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಕರುಳಿನ ಕಾಯಿಲೆಗೆ ಕಾರಣವಾಗುತ್ತದೆ. ಕಾಲಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಆದ್ರೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸೋದು ಸುಲಭವಲ್ಲ.

ನೀರಿನ ಟ್ಯಾಂಕ್ ನಲ್ಲಿಳಿದು ಅದನ್ನು ಸ್ವಚ್ಛಗೊಳಿಸುವುದು ಕಷ್ಟಸಾಧ್ಯ. ಆದ್ರೆ ಈ ಸಣ್ಣ ಟ್ರಿಕ್ ಮೂಲಕ ಟ್ಯಾಂಕ್ ಸ್ವಚ್ಛಗೊಳಿಸಬಹುದು. ಬ್ಲೀಚಿಂಗ್ ಪುಡಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಬೆಸ್ಟ್. ವೈದ್ಯರ ಪ್ರಕಾರ ಬ್ಲೀಚಿಂಗ್ ಪುಡಿ ನೀರಿನ ಟ್ಯಾಂಕ್ ನಲ್ಲಿರುವ ಎಲ್ಲ ಬ್ಯಾಕ್ಟೀರಿಯಾವನ್ನು ಕೊಲ್ಲುವ ಕೆಲಸ ಮಾಡುತ್ತದೆ. ಬ್ಲೀಚಿಂಗ್ ಪುಡಿ ಹಾಕುವಾಗ ಅದ್ರ ಪ್ರಮಾಣ ನೋಡಿಕೊಳ್ಳಬೇಕಾಗುತ್ತದೆ.

ಬ್ಲೀಚಿಂಗ್ ಪುಡಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಇದು ಅಗ್ಗವೂ ಹೌದು. 100ರಿಂದ 150 ಗ್ರಾಂ ಪ್ಯಾಕ್ ಗೆ ಸುಮಾರು 30-40 ರೂಪಾಯಿಯಿರುತ್ತದೆ.

ಒಂದು ಲೀಟರ್ ನೀರಿಗೆ 5 ಮಿಲಿ ಬ್ಲೀಚಿಂಗ್ ಪುಡಿ ಬೇಕಾಗುತ್ತದೆ.

1000 ಲೀಟರ್ ನೀರಿನ ಟ್ಯಾಂಕ್ ಗೆ 4 ಗ್ರಾಂ ಬ್ಲೀಚಿಂಗ್ ಪುಡಿ ಹಾಕಿದ್ರೆ ಸಾಕು. ನೀರಿನ ಟ್ಯಾಂಕ್ ಗೆ ಬ್ಲೀಚಿಂಗ್ ಪುಡಿ ಹಾಕಿ 15 ನಿಮಿಷ ಹಾಗೆ ಬಿಟ್ಟರೆ ಟ್ಯಾಂಕ್ ಸ್ವಚ್ಛವಾಗುತ್ತದೆ.

 

 

Tags :
ನಿಮ್ಮ ನೀರಿನ ಟ್ಯಾಂಕ್ನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ಇದ್ದರೆ ಹೀಗೆ ಮಾಡಿ.!
Advertisement
Next Article