For the best experience, open
https://m.bcsuddi.com
on your mobile browser.
Advertisement

ನಿಮ್ಮ ದ್ವಿಚಕ್ರ ವಾಹನದಲ್ಲಿ ಮೈಲೇಜ್ ಕಡಿಮೆಯಾಗಿದೆಯೇ? ಈ ಟಿಪ್ಸ್ ಫಾಲೋ ಮಾಡಿ… ಕಂಪನಿ ಕೂಡ ಹೇಳುವುದಿಲ್ಲ..!

09:57 AM Aug 13, 2024 IST | BC Suddi
ನಿಮ್ಮ ದ್ವಿಚಕ್ರ ವಾಹನದಲ್ಲಿ ಮೈಲೇಜ್ ಕಡಿಮೆಯಾಗಿದೆಯೇ  ಈ ಟಿಪ್ಸ್ ಫಾಲೋ ಮಾಡಿ… ಕಂಪನಿ ಕೂಡ ಹೇಳುವುದಿಲ್ಲ
Advertisement

ಭಾರತದಲ್ಲಿ ದ್ವಿಚಕ್ರ ವಾಹನಗಳು ಹಲವರಿಗೆ ಜೀವನಾಧಾರವಾಗಿವೆ, ಬೈಕ್-ಸ್ಕೂಟರ್‌ಗಳಿಂದಲೇ ದುಡಿದು ಮನೆ ಮಂದಿಯನ್ನು ಸಾಕುವವರಿದ್ದಾರೆ. ಆದ್ರೆ ಇತ್ತೀಚೆಗೆ ಏರಿಕೆಯಾಗುತ್ತಿರುವ ಇಂಧನ ಬೆಲೆಗಳು ಮಧ್ಯಮ ಹಾಗೂ ಬಡ ವರ್ಗವನ್ನು ಚಿಂತೆಗೀಡುಮಾಡಿದೆ. ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆಯೊಂದಿಗೆ, ಅನೇಕರು ತಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇದು ದೊಡ್ಡ ಸಮಸ್ಯೆಯಂತೆ ಕಂಡರೂ ತುಂಬಾ ಸಿಂಪಲ್ ಪರಿಹಾರಗಳಿವೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement

ಹೌದು, ಬ್ರೇಕ್ ಮತ್ತು ಗೇರ್ ಅನ್ನು ಸರಿಯಾಗಿ ಬಳಕೆ ಮಾಡಬೇಕಾಗುತ್ತದೆ. ಸರಿಯಾದ ಟೆಕ್‌ನಿಕ್‌ಗಳನ್ನು ಅರ್ಥಮಾಡಿಕೊಂಡರೆ ಸಾಕು ಇಂಧನ ಉಳಿತಾಯ ಮಾಡಬಹುದು.

ಸೂಕ್ತ ಎಂಜಿನ್ ಪರ್ಫಾಮೆನ್ಸ್‌ಗೆ ಸೂಕ್ತವಾದ ಗೇರ್‌ನಲ್ಲಿ ಸವಾರಿ ಮಾಡುವುದು ಅತ್ಯಗತ್ಯ. ಹಾಗಲ್ಲದೇ ಹೆಚ್ಚಿನ ಅಥವಾ ಕಡಿಮೆ ವೇಗದಲ್ಲಿ ತಪ್ಪಾದ ಗೇರ್‌ನಲ್ಲಿ ಸವಾರಿ ಮಾಡುವುದರಿಂದ ಪೆಟ್ರೋಲ್ ಬಳಕೆ ಹೆಚ್ಚಾಗುತ್ತದೆ. ಹಾಗಾಗಿ ಸರಿಯಾದ ಗೇರ್ ಅನ್ನು ಬಳಸುವುದರಿಂದ ಎಂಜಿನ್ ಮೇಲೆ ಲೋಡ್ ಕಡಿಮೆಯಾಗಿ ಮೈಲೇಜ್ ಹೆಚ್ಚಾಗುತ್ತದೆ.

ಸೂಕ್ತ ಎಂಜಿನ್ ಪರ್ಫಾಮೆನ್ಸ್‌ಗೆ ಸೂಕ್ತವಾದ ಗೇರ್‌ನಲ್ಲಿ ಸವಾರಿ ಮಾಡುವುದು ಅತ್ಯಗತ್ಯ. ಹಾಗಲ್ಲದೇ ಹೆಚ್ಚಿನ ಅಥವಾ ಕಡಿಮೆ ವೇಗದಲ್ಲಿ ತಪ್ಪಾದ ಗೇರ್‌ನಲ್ಲಿ ಸವಾರಿ ಮಾಡುವುದರಿಂದ ಪೆಟ್ರೋಲ್ ಬಳಕೆ ಹೆಚ್ಚಾಗುತ್ತದೆ. ಹಾಗಾಗಿ ಸರಿಯಾದ ಗೇರ್ ಅನ್ನು ಬಳಸುವುದರಿಂದ ಎಂಜಿನ್ ಮೇಲೆ ಲೋಡ್ ಕಡಿಮೆಯಾಗಿ ಮೈಲೇಜ್ ಹೆಚ್ಚಾಗುತ್ತದೆ.

ಬೈಕು ಸವಾರಿ ಮಾಡುವಾಗ, ವೇಗ ಮತ್ತು ಗೇರ್‌ಗಳು ಸೇರಿದಂತೆ ಬ್ರೇಕ್‌ಗಳನ್ನು ಸರಿಯಾಗಿ ಬಳಸದಿದ್ದರೂ ಮೈಲೇಜ್ ಕಡಿಮೆಯಾಗಿವ ಸಾಧ್ಯತೆಗಳು ಹೆಚ್ಚು. ಅಂತೆಯೇ, ಅಸಮರ್ಪಕ ಬ್ರೇಕಿಂಗ್ ತಂತ್ರಗಳು ಹೆಚ್ಚಿನ ಇಂಧನ ವೆಚ್ಚಕ್ಕೆ ಕಾರಣವಾಗುತ್ತವೆ. ಆದ್ದರಿಂದ, ಬ್ರೇಕ್ ಮತ್ತು ಗೇರ್ ಎರಡನ್ನೂ ಬಳಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಮುಖ್ಯವಾಗಿ ಬ್ರೇಕ್ ಪ್ಯಾಡ್‌ಗಳ ಮೇಲೆ ನಿರಂತರ ಒತ್ತಡದೊಂದಿಗೆ ಸವಾರಿ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದು ಚಲನೆಗೆ ಅಡ್ಡಿಪಡಿಸಿ ಎಂಜಿನ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಹೆಚ್ಚಿನ ಪೆಟ್ರೋಲ್ ಬಳಕೆಯಾಗುತ್ತದೆ. ಕಡಿಮೆ ವೇಗದಲ್ಲಿ ಸವಾರಿ ಮಾಡುವಾಗ, ಕಡಿಮೆ ಗೇರ್‌ಗಳನ್ನು ಬಳಸಿ. ಹೆಚ್ಚಿನ ವೇಗಕ್ಕಾಗಿ, ಟಾಪ್ ಗೇರ್ ಉತ್ತಮ. ಹಾಗಲ್ಲದೇ ಕಡಿಮೆ ವೇಗದಲ್ಲಿ ಟಾಪ್ ಗೇರ್ ಅಥವಾ ಹೆಚ್ಚಿನ ವೇಗದಲ್ಲಿ ಕಡಿಮೆ ಗೇರ್ ಹಾನಿಯುಂಟು ಮಾಡುತ್ತದೆ.

ನಿಯಮಿತ ನಿರ್ವಹಣೆ: ಏರ್ ಫಿಲ್ಟರ್‌ಗಳು, ಆಯಿಲ್ ಮತ್ತು ಸ್ಪಾರ್ಕ್ ಪ್ಲಗ್‌ಗಳನ್ನು ಬದಲಾಯಿಸುವುದು, ಚೈನ್ ನ ನಿಯಮಿತ ನಿರ್ವಹಣೆಯು ಉತ್ತಮ ಮೈಲೇಜ್ ನೀಡಲು ಸಹಕರಿಸುತ್ತದೆ. ಆದ್ದರಿಂದ, ನಿಮ್ಮ ವಾಹನವನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸಿ. ಹೆಚ್ಚುವರಿ ಲಗೇಜ್‌ಗಳನ್ನು ತಪ್ಪಿಸುವ ಮೂಲಕ ಬೈಕ್ ತೂಕವನ್ನು ಕಡಿಮೆಯಾಗಿ ಮೈಲೇಜ್ ಸುಧಾರಿಸಲು ಸಹಾಯ ಮಾಡುತ್ತದೆ.

ಸುಗಮ ಚಾಲನಾ ಅಭ್ಯಾಸ: ಸೂಕ್ತ ಮೈಲೇಜ್‌ಗಾಗಿ ಸುಗಮ ಚಾಲನಾ ಅಭ್ಯಾಸ ಅತ್ಯಗತ್ಯ. ಕಠಿಣ ಅಥವಾ ತ್ವರಿತ ವೇಗವರ್ಧನೆಯನ್ನು ತಪ್ಪಿಸಿ, ಏಕೆಂದರೆ ಇದು ಆಗಾಗ್ಗೆ ಗೇರ್ ಶಿಫ್ಟಿಂಗ್ ಮತ್ತು ಬ್ರೇಕಿಂಗ್‌ಗೆ ಕಾರಣವಾಗುತ್ತದೆ. ಹೀಗಾದಾಗ ಪೆಟ್ರೋಲ್ ಬಳಕೆಯನ್ನು ಹೆಚ್ಚಿಸುತ್ತದೆ. ಸ್ಥಿರ ವೇಗವನ್ನು ಕಾಪಾಡಿಕೊಳ್ಳುವುದರಿಂದ ಮೈಲೇಜ್ ಹೆಚ್ಚಿಸುತ್ತದೆ.

ಎಂಜಿನ್ ಶಬ್ದ ಮತ್ತು ವೇಗದ ಆಧಾರದ ಮೇಲೆ ಗೇರ್ ಶಿಫ್ಟ್ ಮಾಡಬೇಕು. ಕಡಿಮೆ ವೇಗದಲ್ಲಿ ಟಾಪ್ ಗೇರ್ ನಲ್ಲಿ ಚಲಿಸುವುದರಿಂದ ಎಂಜಿನ್ ಹೆಚ್ಚು ಕೆಲಸ ಮಾಡುತ್ತದೆ, ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಆಕ್ಸಿಲರೇಟರ್ ಅನ್ನು ಅನಗತ್ಯವಾಗಿ ಬಳಸುವುದನ್ನು ತಪ್ಪಿಸಿ, ಏಕೆಂದರೆ ಅತಿಯಾದ ವೇಗವರ್ಧನೆಯು ಪೆಟ್ರೋಲ್ ಬಳಕೆಯನ್ನು ಹೆಚ್ಚಿಸುತ್ತದೆ.

Author Image

Advertisement