ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿಮ್ಮ ಕೈತೋಟದಲ್ಲಿ ಕಾಳು ಮೆಣಸಿನ ಗಿಡಕ್ಕೆ ಜಾಗವಿಡಿ- ಇದು ಆಪತ್ಕಾಲದ ಬಂಧು

09:02 AM Jul 03, 2024 IST | Bcsuddi
Advertisement

ಇನ್ನೇನು ಮಳೆಗಾಲ ಆರಂಭವಾಗಿದೆ. ನಿಮ್ಮ ಹೂದೋಟದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಹಾಗಿದ್ದರೆ ನಿಮ್ಮ ಕೈತೋಟದಲ್ಲಿ ಕಾಳು ಮೆಣಸಿನ ಗಿಡಕ್ಕೆ ಜಾಗವಿಡಿ. ಇದು ಆಪತ್ಕಾಲದ ಬಂಧು ಎಂಬುದು ನಿಮಗೆ ತಿಳಿದಿರಲಿ. ಕಾಳುಮೆಣಸಿನಿಂದ ಕಷಾಯ ತಯಾರಿಸಿ ಹೇಗೆ ಶೀತ ಕೆಮ್ಮು ಸಮಸ್ಯೆಯನ್ನು ದೂರ ಮಾಡಿಕೊಳ್ಳುತ್ತಿರೋ ಅದೇ ರೀತಿ ಕಾಳುಮೆಣಸಿನ ಎಲೆಗಳನ್ನು ಕತ್ತರಿಸಿ ಹಾಕಿ ನೀರಿನೊಂದಿಗೆ ಕುದಿಸಿ ಬೆಳಿಗ್ಗೆ ಸಂಜೆ ಸೇವನೆ ಮಾಡುವುದರಿಂದ ಗಂಟಲು ನೋವು ಹಾಗೂ ಶೀತದ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಎಲೆಗಳನ್ನು ದೋಸೆ ಕಾವಲಿಯಲ್ಲಿ ಇಟ್ಟು ಬಿಸಿಮಾಡಿ ನೋವಿರುವ ಜಾಗಕ್ಕೆ ಇದರಿಂದ ೧೦ ನಿಮಿಷ ಶಾಖ ಕೊಟ್ಟರೆ ಒಂದೇ ದಿನದಲ್ಲಿ ನೋವು ಕಡಿಮೆಯಾಗುತ್ತದೆ. ಕಾಲು ಸೆಳೆತ, ರಕ್ತ ಹೆಪ್ಪುಗಟ್ಟಿರುವ ಗಾಯಗಳು, ಇಂಜೆಕ್ಷನ್ ಚುಚ್ಚಿದ ಜಾಗದ ನೋವು ಹೀಗೆ ಮಾಡುವುದರಿಂದ ಬಹುಬೇಗ ದೂರವಾಗುತ್ತದೆ. ಕಾಳುಮೆಣಸಿನಷ್ಟೇ ಹಾಗೂ ಸ್ಟ್ರಾಂಗ್ ಆಗಿರುವ ಇದರ ಸೊಪ್ಪನ್ನು ಹಲವು ಕಾರಣಗಳಿಗೆ ಬಳಸಬಹುದು. ಹಾಗಿದ್ದರೆ ತಡ ಯಾಕೆ ಇಂದೇ ನಿಮ್ಮ ಮನೆಯಂಗಳದಲ್ಲಿ ಕಾಳುಮೆಣಸಿನ ಬಳ್ಳಿ ನೆಟ್ಟು ಬಿಡಿ.

Advertisement

Advertisement
Next Article