For the best experience, open
https://m.bcsuddi.com
on your mobile browser.
Advertisement

ನಿನ್ನೆ ರಾತ್ರಿ ಬುಧವಾರ ಸುರಿದ ಮಳೆ .!ಚಿತ್ರದುರ್ಗ ತಾಲ್ಲೂಕಿನಲ್ಲಿ 53 ಮಿ.ಮೀ ಮಳೆ

04:47 PM Aug 14, 2024 IST | BC Suddi
ನಿನ್ನೆ ರಾತ್ರಿ ಬುಧವಾರ ಸುರಿದ ಮಳೆ   ಚಿತ್ರದುರ್ಗ ತಾಲ್ಲೂಕಿನಲ್ಲಿ 53 ಮಿ ಮೀ ಮಳೆ
Advertisement

ಚಿತ್ರದುರ್ಗ      ಬುಧವಾರ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ತಾಲ್ಲೂಕಿನಲ್ಲಿ 53 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಾಗಿದೆ.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 25.6 ಮಿ.ಮೀ, ಹಿರಿಯೂರು ತಾಲ್ಲೂಕು 15.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 45.6 ಮಿ.ಮೀ, ಹೊಸದುರ್ಗ ತಾಲ್ಲೂಕು 21.4 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 32.3 ಮಿ.ಮೀ ಮಳೆಯಾಗಿದೆ.

Advertisement

ಹೋಬಳಿವಾರು ಮಳೆ ವಿವರ:

ಚಳ್ಳಕೆರೆ  ತಾಲ್ಲೂಕಿನ ಚಳ್ಳಕೆರೆಯಲ್ಲಿ 17.5 ಮಿ.ಮೀ, ನಾಯಕನಹಟ್ಟಿ 36 ಮಿ.ಮೀ, ಪರಶುರಾಂಪುರ 15.8 ಮಿ.ಮೀ, ತಳಕು 20.3 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 36.4 ಮಿ.ಮೀ, ಭರಮಸಾಗರ 24.1 ಮಿ.ಮೀ, ಹಿರೇಗುಂಟನೂರು 37.9 ಮಿ.ಮೀ, ತುರುವನೂರು 37.9 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 12 ಮಿ.ಮೀ, ಐಮಂಗಲ 16.2 ಮಿ.ಮೀ, ಧರ್ಮಪುರ 8.8 ಮಿ.ಮೀ, ಜೆ.ಜೆ.ಹಳ್ಳಿ 4.4 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 33.5 ಮಿ.ಮೀ, ಬಿ.ದುರ್ಗ 40.1 ಮಿ.ಮೀ, ರಾಮಗಿರಿ 22.3 ಮಿ.ಮೀ, ತಾಳ್ಯ 27 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 23.1 ಮಿ.ಮೀ, ಮಾಡದಕೆರೆ 19.5 ಮಿ.ಮೀ, ಮತ್ತೋಡು 9.4 ಮಿ.ಮೀ, ಶ್ರೀರಾಂಪುರ 5.7 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರುನಲ್ಲಿ 27.7 ಮಿ.ಮೀ ಹಾಗೂ ದೇಮಸಮುದ್ರದಲ್ಲಿ 33.7 ಮಿ.ಮೀ ಮಳೆಯಾಗಿದೆ.

ಬುಧವಾರ ಸುರಿದ ಮಳೆಗೆ ಚಳ್ಳಕೆರೆ ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 7 ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳು ವರದಿಯಾಗಿದ್ದು, ಚಿತ್ರದುರ್ಗ ತಾಲ್ಲೂಕಿನಲ್ಲಿ 14 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ವರದಿ ತಿಳಿಸಿದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Tags :
Author Image

Advertisement