ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿತ್ಯಪುಷ್ಪದ ಬಳಕೆಯಿಂದ ಪ್ರತಿನಿತ್ಯವೂ ಆರೋಗ್ಯ ಕಾಪಾಡಿಕೊಳ್ಳಬಹುದು ಇಲ್ಲಿದೆ ಮಾಹಿತಿ

09:06 AM Oct 18, 2024 IST | BC Suddi
Advertisement

ಮನೆಯಲ್ಲಿ ಸುಲಭವಾಗಿ ಸಿಗುವ ನಿತ್ಯ ಪುಷ್ಪದ ಆರೋಗ್ಯ ಗುಣ ಅಷ್ಟಿಷ್ಟಲ್ಲ. ಇಲ್ಲಿದೆ ನೋಡಿ ಆ ಬಗ್ಗೆ ಮಾಹಿತಿ. ಮನೆಯಂಗಳದಲ್ಲಿ ಮನಸೂರೆಗೊಳ್ಳುವಂತೆ ಅರಳಿಕೊಳ್ಳುವ ಪುಟ್ಟ ಗಿಡ ನಿತ್ಯ ಪುಷ್ಠ ಅಥವಾ ಸದಾ ಪುಷ್ಟ. ದೇವರ ಪೂಜೆಗೆಂದು ಬಳಸುವ ಈ ಗಿಡದ ಹೂವು ಆರೋಗ್ಯವನ್ನು ವೃದ್ಧಿಸಲು ಕೂಡ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ತಿಳಿ ಗುಲಾಬಿ, ಬಿಳಿಯ ಬಣ್ಣದಲ್ಲಿ ಅರಳುವ ಈ ಹೂವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

Advertisement

ಆಯುರ್ವೇದದಲ್ಲಿಯೂ ಈ ನಿತ್ಯ ಪುಷ್ಪದ ಗಿಡದ ಬಳಕೆಯನ್ನು ಉಲ್ಲೇಖಿಸಲಾಗುತ್ತದೆ. ಈ ಹೂವನ್ನು ಹಿಂದಿಯಲ್ಲಿ ಸದಾಬಹಾರ್‌ ಎಂದು, ಇಂಗ್ಲಿಷ್‌ನಲ್ಲಿ ಮದಗಾಸ್ಕರ್‌ ಪೆರಿವಿಂಕಲ್‌ ಎಂದು ಕರೆಯುತ್ತಾರೆ. ಮಧುಮೇಹ ನಿಯಂತ್ರಣಕ್ಕೆ ಇದು ಅತ್ಯುತ್ತಮ ಮೂಲಿಕೆ ಎನ್ನಲಾಗುತ್ತದೆ. ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಈ ಹೂವು ಬೆಳೆಯಲು ಹೆಚ್ಚು ನೀರಿನ ಅಗತ್ಯ ಇರುವುದಿಲ್ಲ. ಹೀಗಾಗಿ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯುವ ಈ ಸಸ್ಯ ಆರೋಗ್ಯವನ್ನು ಕೂಡ ವೃದ್ಧಿಸಲು ಸಹಾಯಕವಾಗಿದೆ.

ಹಾಗಾದರೆ ಯಾವೆಲ್ಲ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಈ ನಿತ್ಯ ಪುಷ್ಪ ಹೊಂದಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಕ್ಯಾನ್ಸರ್‌ ರೋಗಕ್ಕೆ ಯಾವುದೇ ನಿರ್ದಿಷ್ಟ ಔಷಧವಿಲ್ಲ. ಆದರೆ ಅದನ್ನು ಹಲವು ರೀತಿಯ ಮೂಲಿಕೆ ಹಾಗೂ ಆಹಾರ, ಜೀವನಶೈಲಿಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದಕ್ಕೆ ನಿತ್ಯ ಪುಷ್ಪ ಉಪಯುಕ್ತವಾಗಿದೆ. ಕ್ಯಾನ್ಸರ್‌ ಜೀವಕೋಶಗಳ ವಿರುದ್ಧ ಹೋರಾಡಲು ನಿತ್ಯ ಪುಷ್ಪದ ಬೇರನ್ನು ಬಳಕೆ ಮಾಡಲಾಗುತ್ತದೆ. ನಿತ್ಯ ಪುಷ್ಪದಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕ್ಯಾನ್ಸರ್‌ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ. ಮಧುಮೇಹ ತಡೆಗೆ ಸಾಕಷ್ಟು ಬಗೆಯ ಮದ್ದುಗಳಿದ್ದರೂ ನಿತ್ಯ ಪುಷ್ಪದ ಬಳಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಜೀರ್ಣಶಕ್ತಿ ಕಡಿಮೆಯಾದಂತೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ.

ಆಯುರ್ವೇದವು ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ನಿಯಂತ್ರಿಸಲು ನಿತ್ಯ ಪುಷ್ಪವನ್ನು ಬಳಸಲು ಶಿಫಾರಸು ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನಿತ್ಯ ಪುಷ್ಪ ಹೂವಿನ ಎಸಳಿನ ಟೀಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬಂದು ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಬದಲಾದ ಜೀವನಶೈಲಿ, ಒತ್ತಡದ ಬದುಕು, ಆಹಾರ ಪದ್ಧತಿಯಿಂದ ಅಧಿಕ ರಕ್ತದೊತ್ತಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಇದಕ್ಕೆ ಧ್ಯಾನ, ಯೋಗದಲ್ಲಿಯೂ ಪರಿಹಾರವಿದೆ.

ಅದೇ ರೀತಿ ನಿತ್ಯ ಪುಷ್ಪ ಗಿಡವೂ ಕೂಡ ನಿಮ್ಮ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಪ್ರತಿದಿನ ನಿತ್ಯ ಪುಷ್ಪ ಗಿಡದ ಎಲೆಗಳ ಪುಡಿಯನ್ನು ಚಿಟಿಕೆಯಷ್ಟು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ನಿತ್ಯ ಪುಷ್ಪ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ಋತು ಚಕ್ರದ ಸಮಸ್ಯೆಗಳೂ ಕೂಡ ನಿವಾರಣೆಯಾಗುತ್ತದೆ. ಹೀಗಾಗಿ ನಿತ್ಯ ಪುಷ್ಪ ಗಿಡ ನಿತ್ಯ ಆರೋಗ್ಯವನ್ನು ನೀಡುವ ಗಿಡವಾಗಿದೆ. ನಿತ್ಯ ಪುಷ್ಪದ ಬಳಕೆಯಿಂದ ಖಿನ್ನತೆ, ಆತಂಕದಂತಹ ಮಾನಸಿಕ ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ನೀವೇನಾದರೂ ಮಾನಸಿಕವಾಗಿ ದಣಿದಿದ್ದರೆ ಅಥವಾ ಮನಸ್ಸು ಕೆಟ್ಟಂತೆ ಭಾಸವಾಗುತ್ತಿದ್ದರೆ ನಿತ್ಯ ಪುಷ್ಪ ಹೂವಿನ ಚಹಾ ಮಾಡಿ ಸೇವಿಸಿ. ಅಥವಾ ಹೀಗೂ ಮಾಡಬಹುದು, ನಿತ್ಯ ಪುಷ್ಪ ಹೂವಿನ ರಸವನ್ನು ಪ್ರತಿದಿನ ಒಂದೆರಡು ಚಮಚ ಸೇವಿಸುತ್ತಾ ಬಂದರೆ ಮಾನಸಿಕವಾಗಿ ಸದೃಢರಾಗಬಹುದು. ಬಿಸಿಲಿನ ಝಳ, ನಿದ್ದೆಗೆಡುವುದರಿಂದ ಚರ್ಮದ ಸಮಸ್ಯೆ ಕಾಡಬಹುದು. ಸ್ಕಿನ್‌ ಟ್ಯಾನಿಂಗ್‌, ಕಪ್ಪು ಕಲೆಗಳು, ಮೊಡವೆಯಂತಹ ಸಮಸ್ಯೆಗಳಿಗೆ ನಿತ್ಯ ಪುಷ್ಪ ಪರಿಹಾರ ನೀಡುತ್ತದೆ. ನಿತ್ಯ ಪುಷ್ಪದ ಗಿಡದ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೆ ಮುಖದ ಕಾಂತಿ ಕೂಡ ಹೆಚ್ಚಾಗುತ್ತದೆ

Advertisement
Next Article