ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ನಾವು ಸಿಎಂ ಪದವಿ ಬಗ್ಗೆ ಚರ್ಚೆ ಯಾವತ್ತೂ ಮಾಡಿಲ್ಲ'- ಪರಮೇಶ್ವರ್‌ ಸ್ಪಷ್ಟನೆ

12:40 PM Oct 10, 2024 IST | BC Suddi
Advertisement

ಬೆಂಗಳೂರು : ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಅವರು ಸದಾಶಿವನಗರದ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್‌ ಅವರನ್ನ ಭೇಟಿ ಮಾಡಿದ್ದಾರೆ.

Advertisement

ಹೆಚ್‌ಡಿಕೆ ಹಾಗೂ ಯಡಿಯೂರಪ್ಪ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ, ಮುಡಾ ಪ್ರಕರಣ ಸೇರಿ ಕೆಲವು ಮಹತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.ಬಳಿಕ ಮಾಧ್ಯಮಕ್ಕೆ ಮಾತನಾಡಿದ ಗೃಹ ಸಚಿವರು, ಪ್ರತ್ಯೇಕ ಸಭೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಲು ತಾಕೀತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನಾಗಲೀ ಸತೀಶ್ ಜಾರಕಿಜೊಳಿ ಆಗಲೀ, ಮಹಾದೇಪ್ಪ ಆಗಲೀ ನಾವು ಸಿಎಂ ಪದವಿ ಬಗ್ಗೆ ಚರ್ಚೆ ಯಾವತ್ತೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ನಾವು ಹೇಳಿದ್ದೀವಿ. ಇದು ಬಿಟ್ಟು ಸಿಎಂ ಅವರನ್ನ ಬದಲಾಯಿಸಿ, ಬೇರೆಯವರನ್ನು ಮಾಡಿ, ನಮಗೆ ಮಾಡಿ ಅಂತ ಮಾತಾಡಿಲ್ಲ. ಇನ್ಮುಂದೆ ನಾನು ಸಿಎಂ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

ನಾವು ಅನವಶ್ಯಕವಾಗಿ ಡಿನ್ನರ್ ಮೀಟಿಂಗ್ , ರಾಜಕೀಯ ಮೀಟಿಂಗ್ಸ್ ಮಾಡಿಲ್ಲ, ಮಾಡುವುದೂ ಇಲ್ಲ. ಮುಂದೆಯೂ ಅನವಶ್ಯಕ ಭೇಟಿಗಳನ್ನು ಮಾಡಲ್ಲ. ಇದು ನನ್ನ ಸ್ಪಷ್ಟ ಹೇಳಿಕೆ. ಏನೂ ಇಲ್ಲದೇ ನಮ್ಮನ್ನು ಆಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ಬೇಜಾರಾಗಲ್ವಾ? ನಾವೆಲ್ಲ ಜವಾಬ್ದಾರಿ ಇರೋರು, ಹುಡುಗಾಟಿಕೆ ಮಾಡೋರಲ್ಲ, ನಾವು ಪಕ್ಷದಲ್ಲಿ ಹಿರಿಯರು, ನಮಗೂ ಜವಾಬ್ದಾರಿ ಇದೆ ಎಂದು ಕಿಡಿಕಾರಿದರು

 

Advertisement
Next Article