ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

 ನಾವು ನಿಮ್ಮಂತೆ ರೀಲ್ಸ್ ಮಾಡೋರಲ್ಲ, ಶ್ರಮಪಟ್ಟು ದುಡಿಯುವವರು - ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

10:38 AM Aug 02, 2024 IST | BC Suddi
Advertisement

ನವದೆಹಲಿ: ರೀ ಸುಮ್ನೇ ಕುಳಿತುಕೊಳ್ಳಿ ನಾವು ನಿಮ್ಮಂತೆ ರೀಲ್ಸ್ ಮಾಡೋರಲ್ಲ. ಬದಲಾಗಿ ಶ್ರಮಪಟ್ಟು ದುಡಿಯುತ್ತೇವೆ ಎಂದು ಹೇಳುವ ಮೂಲಕ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಮೇಲೆ ಕೆಂಡಾಮಂಡಲರಾಗದ್ದಾರೆ.

Advertisement

ರೈಲ್ವೇ ನೇಮಕಾತಿ ಹಾಗೂ ಅವ್ಯವಸ್ಥೆ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಉತ್ತರಿಸುತ್ತಿದ್ದ ವೇಳೆ ಕೋಲಾಹಲ ಎಬ್ಬಿಸಿದ ಪ್ರತಿಪಕ್ಷ ಸದಸ್ಯರ ಮೇಲೆ ಅಶ್ವಿನಿ ವೈಷ್ಣವ್ ಕಿಡಿ ಕಾರಿದ್ದಾರೆ. "2005 ರಲ್ಲಿ ರೂಪಿಸಲಾದ ನಿಯಮದಿಂದ ಲೋಕೋ ಪೈಲೆಟ್‌ಗಳ ಕೆಲಸ ಅವಧಿ ಹೆಚ್ಚಾಗಿ ವಿರಾಮದ ಅವಧಿ ಕಡಿಮೆ ಇತ್ತು. 2016 ರಲ್ಲಿ ಈ ನಿಯಮಗಳಿಗೆ ನಮ್ಮ ಸರಕಾರ ತಿದ್ದುಪಡಿ ಮಾಡಿದೆ.

ಲೋಕೋಪೈಲಟ್‌ಗಳ ಕೆಲಸದ ಅವಧಿಯನ್ನು ವೈಜ್ಞಾನಿಕವಾಗಿ ನಿಗದಿ ಮಾಡಲಾಗಿದೆ. ಎಲ್ಲ ಲೋಕೋಪೈಲಟ್‌ಗಳಿಗೆ ಹೆಚ್ಚಿನ ಸೌಲಭ್ಯ ನೀಡಲಾಗಿದೆ. ಉಷ್ಣತೆ ಹೆಚ್ಚಾಗುವ ಲೊಕೊ ಕ್ಯಾಬ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಾಗಿದೆ. ಸುಮಾರು 7,000 ಕ್ಕೂ ಹೆಚ್ಚು ಲೊಕೊ ಕ್ಯಾಬ್‌ಗಳು ಹವಾನಿಯಂತ್ರಿತವಾಗಿವೆ ಎಂದು ಅಶ್ವಿನಿ ವೈಷ್ಣವ್ ಅಧಿವೇಶನದಲ್ಲಿ ಉತ್ತರಿಸಿದ್ದಾರೆ.

Advertisement
Next Article