For the best experience, open
https://m.bcsuddi.com
on your mobile browser.
Advertisement

ನಾವು ಒಗ್ಗಟ್ಟಾಗಿರಬೇಕು, ಇಲ್ಲದಿದ್ದರೆ ನಮ್ಮನ್ನು ಕತ್ತರಿಸಲಾಗುತ್ತದೆ: ಯೋಗಿ ಆದಿತ್ಯನಾಥ್ ಹೀಗೆ ಹೇಳಲು ಕಾರಣ ಏನು ಗೊತ್ತಾ...?

12:45 PM Aug 27, 2024 IST | BC Suddi
ನಾವು ಒಗ್ಗಟ್ಟಾಗಿರಬೇಕು  ಇಲ್ಲದಿದ್ದರೆ ನಮ್ಮನ್ನು ಕತ್ತರಿಸಲಾಗುತ್ತದೆ  ಯೋಗಿ ಆದಿತ್ಯನಾಥ್ ಹೀಗೆ ಹೇಳಲು ಕಾರಣ ಏನು ಗೊತ್ತಾ
Advertisement

ಲಕ್ನೋ: 'ನಾವು (ಭಾರತೀಯರು) ಒಗ್ಗಟ್ಟಾಗಿರಬೇಕು, ಇಲ್ಲದಿದ್ದರೆ ನಮ್ಮನ್ನು ಕತ್ತರಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದ ಜನತೆಗೆ ಸಂದೇಶವೊಂದನ್ನು ನೀಡಿದ್ದಾರೆ.

ಸಮಾರಂಭವೊಂದರಲ್ಲಿ ಸೋಮವಾರ ಮಾತನಾಡಿದ ಅವರು, ರಾಷ್ಟ್ರಕ್ಕಿಂತ ದೊಡ್ಡದು ಯಾವುದೂ ಇರಲು ಸಾಧ್ಯವಿಲ್ಲ, ನಾವು ಒಗ್ಗಟ್ಟಾಗಿದ್ದರೆ ರಾಷ್ಟ್ರವು ಬಲಿಷ್ಠವಾಗುತ್ತದೆ. ದೇಶ ಸಮೃದ್ಧಿಯ ಉತ್ತುಂಗವನ್ನು ತಲುಪಲು ಜನತೆ ಒಗ್ಗಟ್ಟಿನಿಂದ ಇರಬೇಕು. ಬಾಂಗ್ಲಾದೇಶದಲ್ಲಿ ಆದ ತಪ್ಪುಗಳು ಭಾರತದಲ್ಲಿ ಆಗಬಾರದು. ಬಾಂಗ್ಲಾದೇಶದಲ್ಲಿ ಇತ್ತೀಚೆಗಷ್ಟೇ ಬೃಹತ್ ಸರ್ಕಾರ ವಿರೋಧಿ ಪ್ರತಿಭಟನೆಗಳು ನಡೆದಿದ್ದು, ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲಾಗಿತ್ತು. ನಂತರ ಅಲ್ಲಿನ ಹಿಂದೂಗಳ ಮೇಲೆ ಕಂಡು ಕೇಳರಿಯದಷ್ಟು ದೌರ್ಜನ್ಯ ನಡೆದಿತ್ತು. ಆದರೆ ನಮ್ಮಲ್ಲೇ ಒಡಕು ಸೃಷ್ಟಿಯಾದರೆ ನಮ್ಮನ್ನು ಕತ್ತರಿಸಲಾಗುತ್ತದೆ ಎಂದು ಹೇಳಿದರು. ದೇಶದಲ್ಲಿ ನಡೆದ ಭಾರೀ ಪ್ರತಿಭಟನೆ ನಂತರ ಪ್ರಧಾನಿ ಶೇಕ್‌ ಹಸೀನಾ ಪದಚ್ಯುತಗೊಂಡ ಬಳಿಕ ಹಿಂಸಾಚಾರ ನಡೆದಿತ್ತು. ರಾಜಕೀಯದ ಬೆಳವಣಿಗೆಯಲ್ಲಿ ನೋಬೆಲ್‌ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನೂಸ್ ನೇತೃತ್ವದಲ್ಲಿ ಮಧ್ಯಾಂತರ ಸರ್ಕಾರ ರಚನೆಯಾಗಿತ್ತು. ರಾಜಧಾನಿ ಢಾಕಾದಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ ಪರಿಣಾಮ ಆಗಸ್ಟ್‌ 5ರಂದು ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಪರಾರಿಯಾಗಿದ್ದರು. ಮಾನವ ಹಕ್ಕು ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಶೇಖ್‌ ಹಸೀನಾ ಅವರ 15 ವರ್ಷದ ಆಡಳಿತ ಕೊನೆಗೊಂಡಂತಾಗಿದೆ. ಇಲ್ಲಿನ ಹಿಂದೂಗಳ ಮೇಲೆ ಕಂಡು ಕೇಳರಿಯದಷ್ಟು ದೌರ್ಜನ್ಯ ನಡೆದಿತ್ತು.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Author Image

Advertisement