ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಲಂಡನ್ ನದಿಯಲ್ಲಿ ಶವವಾಗಿ ಪತ್ತೆ

11:38 AM Dec 02, 2023 IST | Bcsuddi
Advertisement

ಲಂಡನ್ :ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ-ಭಾರತೀಯ ವಿದ್ಯಾರ್ಥಿ ಲಂಡನ್‌ನ ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

Advertisement

ಮೃತಪಟ್ಟವರು ಮಿತ್‌ಕುಮಾರ್ ಪಟೇಲ್(23) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ 19 ನೇ ಸೆಪ್ಟೆಂಬರ್ 2023 ರಂದು ಉನ್ನತ ವ್ಯಾಸಂಗಕ್ಕಾಗಿ ಯುಕೆಗೆ ಆಗಮಿಸಿದ್ದು ನವೆಂಬರ್ 17 ರಂದು ನಾಪತ್ತೆಯಾಗಿದ್ದರು.

ನವೆಂಬರ್ 21 ರಂದು ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿ ಥೇಮ್ಸ್ ನದಿಯಲ್ಲಿ ಅವರ ದೇಹವನ್ನು ಮೆಟ್ರೋಪಾಲಿಟನ್ ಪೊಲೀಸರು ಪತ್ತೆ ಹಚ್ಚಿದರು ಅಲ್ಲದೇ ಈ ಸಾವು ಅನುಮಾನಾಸ್ಪದ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಮಿತ್‌ಕುಮಾರ್‌ ರೈತ ಕುಟುಂಬಕ್ಕೆ ಸೇರಿದವರು ಮತ್ತು ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದರು. ಅವರು ನವೆಂಬರ್ 17, 2023 ರಿಂದ ನಾಪತ್ತೆಯಾಗಿದ್ದರು. ಈಗ ನವೆಂಬರ್ 21 ರಂದು ಪೊಲೀಸರು ಕ್ಯಾನರಿ ವಾರ್ಫ್‌ನಿಂದ ನೀರಿನಲ್ಲಿ ಅವರ ಮೃತದೇಹವನ್ನು ಕಂಡುಕೊಂಡರು. ಇದು ನಮಗೆಲ್ಲರಿಗೂ ದುಃಖವಾಗಿದೆ. ಆದ್ದರಿಂದ, ನಾವು ಅವರ ಕುಟುಂಬಕ್ಕೆ ಸಹಾಯ ಮಾಡಲು ಮತ್ತು ಅವರ ದೇಹವನ್ನು ಭಾರತಕ್ಕೆ ಕಳುಹಿಸಲು ನಿಧಿ ಸಂಗ್ರಹಿಸಲು ನಿರ್ಧರಿಸಿದ್ದೇವೆ, ಎಂದು ಸಂಬಂಧಿ ಪಾರ್ಥ್ ಪಟೇಲ್, ಹೇಳಿದರು.ಭಾರತದಲ್ಲಿ ಮಿತ್ಕುಮಾರ್ ಕುಟುಂಬಕ್ಕೆ ಹಣವನ್ನು ಸುರಕ್ಷಿತವಾಗಿ ರವಾನಿಸಲಾಗುವುದು ಎಂದು ಹೇಳಿದರು.

'ಈವ್ನಿಂಗ್ ಸ್ಟ್ಯಾಂಡರ್ಡ್' ಪತ್ರಿಕೆಯ ಪ್ರಕಾರ, ವಿದ್ಯಾರ್ಥಿಯು ನವೆಂಬರ್ 20 ರಂದು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪ್ರಾರಂಭಿಸಲು ಮತ್ತು ಅಮೆಜಾನ್‌ನಲ್ಲಿ ಪಾರ್ಟ್‌‌ಟೈಮ್‌ ಉದ್ಯೋಗ ಮಾಡುಲು ನಿರ್ಧರಿಸಿದ್ದರು.

Advertisement
Next Article