ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಾನು ರಾಜೀನಾಮೆ ಕೊಡುವ ತಪ್ಪು ಮಾಡಿಲ್ಲ - ಪ್ರಾಸಿಕ್ಯೂಷನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

03:26 PM Aug 17, 2024 IST | BC Suddi
Advertisement

ಬೆಂಗಳೂರು : ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ನಾನು ರಾಜೀನಾಮೆ ಕೊಡುವ ತಪ್ಪು ಮಾಡಿಲ್ಲ ಎಂದಿದ್ದಾರೆ.. ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಸಿಎಂ, ರಾಜ್ಯಪಾಲರ ನಡೆಯನ್ನ ನಾನು‌ ನಿರೀಕ್ಷೆ ಮಾಡಿದ್ದೆ, ಯಾವಾಗ ರಾಜ್ಯಪಾಲರು ೨೬ ರಂದು‌ ನೋಟೀಸ್ ಕೊಟ್ಟಿದ್ರು ಅಂದೇ ನಿರೀಕ್ಷೆ ಮಾಡಿದ್ದೆ. ಕುಮಾರಸ್ವಾಮಿ ಮೇಲೆ ನವೆಂಬರ್ ತಿಂಗಳಲ್ಲೇ ಪಿಟಿಷನ್ ಇದೆ,ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮೇಲೆ ಇದೆ.

Advertisement

ಅವರೆಲ್ಲರನ್ನೂ ಬಿಟ್ಟು ನನ್ನ ಮೇಲೆ ಮಾತ್ರ ಶೋಕಾಸ್ ನೋಟೀಸ್ ‌ಕಳುಹಿಸಿದ್ದಾರೆ.. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ, ಈ ಸರ್ಕಾರವನ್ನ ಕಿತ್ತು ಹಾಕಬೇಕು ಎಂದು ಹುನ್ನಾರ ನಡೆಸಿದ್ದಾರೆ..ಅನೇಕ ರಾಜ್ಯದಲ್ಲಿ ಇದೆ ತರಹ ಮಾಡಿದ್ದಾರೆ..ದೆಹಲಿ ಜಾರ್ಖಂಡ್ ನಲ್ಲಿ ಕೂಡ ಇದೇ ರೀತಿ ಆಗಿದೆ. ಇಲ್ಲಿ ಬಿಜೆಪಿ, ಜೆಡಿಎಸ್ ಇಬ್ಬರು ಷಡ್ಯಂತ್ರ ಮಾಡಿದ್ದಾರೆ. ರಾಜ್ಯಪಾಲರ ನಿರ್ಧಾರ ಸಂವಿಧಾನ ಬಾಹಿರವಾಗಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ.

ಕೋರ್ಟ್ ನಲ್ಲಿ ಪ್ರಶ್ನೆ ಮಾಡ್ತೀವಿ.. ಹೈಕಮಾಂಡ್,ಎಲ್ಲಾ ಶಾಸಕರು ಮತ್ತು ಪಕ್ಷ ನನ್ನ ಜೊತೆ ಇದ್ದಾರೆ,ಎಲ್ಲರೂ ನನ್ನ ಜೊತೆಗೆ ಇದ್ದಾರೆ.. ನಾನು ರಾಜೀನಾಮೆ ‌ಕೊಡುವ ತಪ್ಪು ಮಾಡಿಲ್ಲ, ಅವರು ಕಾನೂನು ಬಾಹಿರ ಅಂದಿದ್ದಾರೆ. ರಾಜಭವನವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ರಾಜ್ಯಪಾಲರ ನಡೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article