For the best experience, open
https://m.bcsuddi.com
on your mobile browser.
Advertisement

'ನಾನು, ನನ್ನ ಪೋಷಕರು ಮತ್ತು ಹೆಂಡತಿ ಪೊಲೀಸರಿಗಾಗಿ ಕಾಯುತ್ತಿದ್ದೇವೆ'- ಕ್ರೇಜಿವಾಲ್‌

02:10 PM May 23, 2024 IST | Bcsuddi
 ನಾನು  ನನ್ನ ಪೋಷಕರು ಮತ್ತು ಹೆಂಡತಿ ಪೊಲೀಸರಿಗಾಗಿ ಕಾಯುತ್ತಿದ್ದೇವೆ   ಕ್ರೇಜಿವಾಲ್‌
Advertisement

ನವದೆಹಲಿ: ನಾನು, ನನ್ನ ಪೋಷಕರು ಮತ್ತು ಹೆಂಡತಿ ಪೊಲೀಸರಿಗಾಗಿ ಕಾಯುತ್ತಿದ್ದೇವೆ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಕೇಜ್ರಿವಾಲ್‌ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ಪೋಷಕರು, ಪತ್ನಿ ಜೊತೆ ಮನೆಯಲ್ಲಿ ಕಾಯುತ್ತಿರುವ ವೀಡಿಯೋ ಕೂಡ ಹಂಚಿಕೊಂಡಿದ್ದಾರೆ.

ನಾನು, ನನ್ನ ಪೋಷಕರು ಮತ್ತು ಹೆಂಡತಿ ಪೊಲೀಸರಿಗಾಗಿ ಕಾಯುತ್ತಿದ್ದೇನೆ. ನಿನ್ನೆ ಪೊಲೀಸರು ಕರೆ ಮಾಡಿ ನನ್ನ ಪೋಷಕರ ವಿಚಾರಣೆಗೆ ಸಮಯ ಕೇಳಿದ್ದಾರೆ. ಆದರೆ ಅವರು ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.

Advertisement

ಸ್ವಾತಿ ಮಲಿವಾಲ್‌ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಬುಧವಾರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದ ಕೇಜ್ರಿವಾಲ್‌ ಅವರು, ನ್ಯಾಯಯುತ ತನಿಖೆ ಆಗಬೇಕು ಎಂದು ಕೋರಿದ್ದರು.

Author Image

Advertisement